ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್ ಅಧಿಕಾರಿಗಳ ವರ್ಗಾವಣೆ: ಒಕ್ಕೂಟ ವ್ಯವಸ್ಥೆಯ ಶವಪೆಟ್ಟಿಗೆ ಮೊಳೆ -ಅಬ್ದುಲ್ಲಾ

Last Updated 20 ಜನವರಿ 2022, 16:26 IST
ಅಕ್ಷರ ಗಾತ್ರ

ಶ್ರೀನಗರ: ‘ರಾಜ್ಯ ಸರ್ಕಾರಗಳ ಪೂರ್ವಾನುಮತಿ ಇಲ್ಲದೇ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರವೇ ಇಟ್ಟುಕೊಳ್ಳಲು ಮುಂದಾಗಿರುವ ಕ್ರಮವು ದೇಶದ ಒಕ್ಕೂಟ ವ್ಯವಸ್ಥೆಯ ಶವಪೆಟ್ಟಿಗೆಗೆ ಹೊಡೆದ ಮತ್ತೊಂದು ಮೊಳೆ’ ಎಂದು ಟೀಕಿಸಿದ್ದಾರೆ.

ರಾಜ್ಯಗಳ ಅನುಮತಿ ಇಲ್ಲದೇ ಐಎಎಸ್‌–ಐಪಿಎಸ್‌ ನಿಯೋಜನೆಗೆ ಯೋಜನೆ ರೂಪಿಸಿರುವ ಕುರಿತು ಮಾಧ್ಯಮಗಳ ವರದಿಗೆ ಗುರುವಾರ ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಸರ್ಕಾರದ ಈ ನಿರ್ಧಾರವು ಭಾರತದ ಒಕ್ಕೂಟ ವ್ಯವಸ್ಥೆಯ ಶವಪೆಟ್ಟಿಗೆ ಮತ್ತೊಂದು ಮೊಳೆಯಾಗಲಿದೆ. ತಮ್ಮ ಮುಖ್ಯಕಾರ್ಯದರ್ಶಿ (ಸಿಎಸ್‌) ಹಾಗೂ ಪೊಲೀಸ್‌ ಮಹಾನಿರ್ದೇಶಕ (ಡಿಜಿ) ಅವರನ್ನು ಪ್ರಧಾನಿ ಮೋದಿ ಅವರು ತೆಗೆದರೆ ಹಾಗೂ ಮುಖ್ಯಮಂತ್ರಿ ಮೋದಿ ಹೇಗೆ ಪ್ರತಿಕ್ರಿಯಿಸುತ್ತಾರೆ? 2019ರಿಂದ ಜಮ್ಮು ಮತ್ತು ಕಾಶ್ಮೀರವು ನಿಯೋಜನೆ ಅಧಿಕಾರವನ್ನು ಕಳೆದುಕೊಂಡಿದ್ದು, ಇತರೆ ರಾಜ್ಯಗಳು ಇದೇ ದಾರಿಯಲ್ಲಿ ಸಾಗುವ ಲಕ್ಷಣಗಳು ಕಾಣಿಸುತ್ತಿವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT