ಸೋಮವಾರ, ಡಿಸೆಂಬರ್ 5, 2022
22 °C

ಹೀಲಿಯಂ ಟ್ಯಾಂಕ್‌ ಸ್ಫೋಟ: ವಿಡಿಯೊ ವೈರಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಚೆನ್ನೈ: ಬೀದಿ ಬದಿ ವ್ಯಾಪಾರಿ ಬಳಿಯಿದ್ದ ಹೀಲಿಯಂ ಟ್ಯಾಂಕ್‌ ಸ್ಫೋಟಗೊಂಡು ಓರ್ವ ವ್ಯಕ್ತಿ ಮೃತಪಟ್ಟ ಘಟನೆ ತಿರುಚಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಇದರ ಸಿಸಿಟಿವಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲೀಗ ವೈರಲ್‌ ಆಗಿದ್ದು, ರಸ್ತೆ ಬದಿ ವ್ಯಾಪಾರಿ ಬಳಿ ಬಲೂನ್‌ ಖರೀದಿಸುತ್ತಿದ್ದ ವ್ಯಕ್ತಿಯೊಬ್ಬರು ಸ್ಫೋಟದಿಂದ ಮೃತಪಟ್ಟಿದ್ದಾರೆ. ನಾಲ್ವರಿಗೆ ಸ್ವಲ್ಪ ಗಾಯಗಳಾಗಿವೆ. ರವಿ(35) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಪೊಲೀಸರು ಬಲೂನ್‌ ಮಾರಾಟಗಾರನನ್ನು ಬಂಧಿಸಿದ್ದಾರೆ. ಬಂಧಿತ ನಾರ್‌ ಸಿಂಗ್‌ ಮೇಲೆ ‘ಅಜಾಗರೂಕತೆಯಿಂದ ಸಾವಿಗೆ ಕಾರಣಿಕರ್ತ’ ಎಂದು ಪ್ರಕರಣ ದಾಖಲಾಗಿದೆ. ಅಲ್ಲಿಯೇ ಸಮೀಪವಿದ್ದ ಬಟ್ಟೆ ಅಂಗಡಿಯ ಸಿಸಿಟಿವಿಯಲ್ಲಿ ಸ್ಫೋಟದ ದೃಶ್ಯಗಳು ಸೆರೆಯಾಗಿವೆ.

ಸ್ಫೋಟದ ಬಳಿಕ ಭಯಗೊಂಡ ಜನರು ಎಲ್ಲೆಂದರಲ್ಲಿ ಓಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಸ್ಫೋಟದಿಂದ ಆಟೊರಿಕ್ಷಾ ಹಾಗೂ ಕೆಲವು ದ್ವಿಚಕ್ರವಾಹನಗಳು ಹಾನಿಗೊಂಡಿವೆ ಎಂದು ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು