ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಮರುವಿಂಗಡಣೆ: ಹೇಳಿಕೆ ನೀಡದಂತೆ ಒಐಸಿಗೆ ಎಚ್ಚರಿಕೆ

Last Updated 16 ಮೇ 2022, 19:35 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕೈಗೊಳ್ಳಲಾಗಿರುವ ಕ್ಷೇತ್ರ ಮರುವಿಂಗಡನೆ ಯೋಜನೆ ಕುರಿತು ಅನವಶ್ಯಕ ಹೇಳಿಕೆಗಳನ್ನು ನೀಡದಂತೆ ಆರ್ಗನೈಸೇಷನ್‌ ಅಫ್‌ ಇಸ್ಲಾಮಿಕ್‌ ಕೋಆಪರೇಷನ್‌ (ಒಐಸಿ) ಸಂಘಟನೆಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಪಾಕಿಸ್ತಾನವನ್ನು ಸೂಚ್ಯವಾಗಿ ಉಲ್ಲೇಖಿಸಿದ ಸರ್ಕಾರ, ‘ಒಂದು ದೇಶದ ಪರವಾಗಿ ಕೋಮುವಾದಿ ಕಾರ್ಯಸೂಚಿ ರೂಪಿಸುವುದರಿಂದ ಹಿಂದೆ ಸರಿಯಿರಿ’ ಎಂದುಒಐಸಿಗೆ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಾಮ್‌ ಬಾಗ್ಚಿ ಅವರು, ‘ಜಮ್ಮು ಮತ್ತು ಕಾಶ್ಮೀರದಲ್ಲಿ ಕೈಗೊಳ್ಳಲಾಗಿರುವಕ್ಷೇತ್ರ ಮರುವಿಂಗಡಣೆಪ್ರಕ್ರಿಯೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಒಐಸಿ ನೀಡಿರುವ ಹೇಳಿಕೆಗಳನ್ನು ನಿರಾಕರಿಸಲಾಗಿದೆ’ ಎಂದಿದ್ದಾರೆ.

ಕ್ಷೇತ್ರಗಳ ಮರು ವಿಂಗಡಣೆ ಮಾಡುವ ಪ್ರಕ್ರಿಯೆಯು ಜಮ್ಮು ಮತ್ತು ಕಾಶ್ಮೀರ ಜನರ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಒಐಸಿ ಹೇಳಿಕೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT