ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವು ವಿಜ್ಞಾನ ಪರೀಕ್ಷೆ ರದ್ದುಪಡಿಸಲು ಆಗ್ರಹ

Last Updated 21 ಫೆಬ್ರುವರಿ 2021, 15:16 IST
ಅಕ್ಷರ ಗಾತ್ರ

ತಿರುವನಂತಪುರ: ‘ಗೋವು ವಿಜ್ಞಾನ’ ಪರೀಕ್ಷೆಯನ್ನು ರದ್ದುಪಡಿಸುವಂತೆ ಕೇರಳ ಸಾಹಿತ್ಯ ಪರಿಷತ್‌ ಆಗ್ರಹಿಸಿದೆ.

ರಾಷ್ಟ್ರಮಟ್ಟದ ಸ್ವಯಂಪ್ರೇರಿತ ಆನ್‌ಲೈನ್‌ ಪರೀಕ್ಷೆ ಇದಾಗಿದೆ. ಫೆ.25ರಂದು ಈ ಪರೀಕ್ಷೆ ನಡೆಯಲಿದೆ. ರಾಷ್ಟ್ರೀಯ ಕಾಮಧೇನು ಆಯೋಗ ಆಯೋಜಿಸಿರುವ ಈ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗುವಂತೆ ಪ್ರೋತ್ಸಾಹಿಸಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಎಲ್ಲ ಕುಲಪತಿಗಳಿಗೆ ಇತ್ತೀಚೆಗೆ ನಿರ್ದೇಶನ ನೀಡಿದೆ.

ದೇಶದಲ್ಲಿ ಮೂಢನಂಬಿಕೆಯನ್ನು ಹಬ್ಬಿಸಲು ಮತ್ತು ಶಿಕ್ಷಣ ವಲಯವನ್ನು ಕೇಸರಿಕರಣಗೊಳಿಸುವ ಪ್ರಯತ್ನ ಇದಾಗಿದೆ ಎಂದು ಪರಿಷತ್‌ ದೂರಿದೆ.

ಯುಜಿಸಿ ಸಹ ಇಂತಹ ಇಂತಹ ಪರೀಕ್ಷೆಗೆ ಪ್ರೋತ್ಸಾಹ ನೀಡುತ್ತಿರುವುದು ಆಶ್ಚರ್ಯಕರ. ರಾಷ್ಟ್ರೀಯ ಕಾಮಧೇನು ಆಯೋಗದ ವೆಬ್‌ಸೈಟ್‌ನಲ್ಲೂ ಅವೈಜ್ಞಾನಿಕ ವಿಷಯಗಳಿವೆ. ದೇಶಿ ತಳಿ ಹಸುವಿನಲ್ಲಿ ಚಿನ್ನದ ಅಂಶ ಇರುವುದರಿಂದ ಹಾಲು ಸಹ ಹಳದಿ ಬಣ್ಣ ಒಳಗೊಂಡಿರುತ್ತದೆ ಎಂದು ಉಲ್ಲೇಖಿಸಲಾಗಿದೆ. ಸರ್ಕಾರದ ಸಂಸ್ಥೆಗಳು ವೈಜ್ಞಾನಿಕವಾಗಿ ಜಾಗೃತಿ ಮೂಡಿಸುವುದನ್ನು ಕೈಬಿಟ್ಟು ಈ ರೀತಿ ಮೂಢನಂಬಿಕೆಗಳನ್ನು ಬಿತ್ತುವ ಕಾರ್ಯದಲ್ಲಿ ತೊಡಗಿವೆ ಎಂದು ಪರಿಷತ್‌ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT