ರಾಜ್ಯಗಳಿಗೆ 3 ದಿನದಲ್ಲಿ 94.66 ಲಕ್ಷ ಡೋಸ್ ಲಸಿಕೆ ಪೂರೈಕೆ: ಕೇಂದ್ರ ಸರ್ಕಾರ

ನವದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾಕಿ ಉಳಿದಿರುವ ಮತ್ತು ಬಳಸದಿರುವ 1.24 ಕೋಟಿಗೂ ಅಧಿಕ ಡೋಸ್ ಲಸಿಕೆ ಲಭ್ಯವಿದೆ. ಅಲ್ಲದೆ, ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 94,66,420 ಡೋಸ್ ಲಸಿಕೆಯನ್ನು ಪೂರೈಸಲಾಗುವುದು ಎಂದು ಕೇಂದ್ರ ಸರ್ಕಾರವು ಗುರುವಾರ ತಿಳಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಆರೋಗ್ಯ ಸಚಿವಾಲಯವು, ಒಟ್ಟಾರೆ 32.92 ಕೋಟಿ ಲಸಿಕೆಯನ್ನು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ ಉಚಿತವಾಗಿ ಪೂರೈಸಲಾಗಿದೆ. ಈ ಪ್ರಕಾರ, ದೇಶದಲ್ಲಿ ಈವರೆಗೆ ಪೋಲಾಗಿರುವ ಲಸಿಕೆಯೂ ಸೇರಿ 31,67,50,891 ಡೋಸ್‌ಗಳು ಬಳಕೆಯಾಗಿವೆ ಎಂದು ತಿಳಿಸಿದೆ.
ಉಳಿದಂತೆ 994,66,420 ಲಸಿಕೆ ಡೋಸ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ ಮೂರು ದಿನಗಳಲ್ಲಿ ಪೂರೈಸಲಾಗುವುದು ಎಂದು ತಿಳಿಸಿದೆ.
ಕೇಂದ್ರ ಸರ್ಕಾರವು ದೇಶದಾದ್ಯಂತ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲು ಬದ್ಧವಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ... ಕೋವಿಶೀಲ್ಡ್ ಲಸಿಕೆ ಪಡೆದವರ ಪ್ರಯಾಣಕ್ಕೆ 9 ಯುರೋಪಿಯನ್ ರಾಷ್ಟ್ರಗಳ ಅನುಮತಿ
ಒಡಿಶಾ: 14 ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ಸ್ಥಗಿತ
ಭುವನೇಶ್ವರ: ಕೊವಿಶೀಲ್ಡ್ ಲಸಿಕೆಯ ಕೊರತೆಯಿಂದಾಗಿ ಒಡಿಶಾ ಸರ್ಕಾರ ಗುರುವಾರ 16 ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಿದೆ.
ರಾಜ್ಯದಲ್ಲಿ ಸದ್ಯ ಕೊವಿಶೀಲ್ಡ್‌ನ 19,520 ಡೋಸ್, ಕೊವ್ಯಾಕ್ಸಿನ್‌ನ 3,24,910 ಲಸಿಕೆಗಳು ಲಭ್ಯವಿವೆ. ಲಸಿಕೆ ಕೊರತೆಯಿಂದ 11 ಜಿಲ್ಲೆಗಳಲ್ಲಿ ಬುಧವಾರವೂ ಅಭಿಯಾನ ನಡೆಸಲಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.