ಶನಿವಾರ, ಮೇ 15, 2021
23 °C

ದೆಹಲಿಯಲ್ಲಿ ಒಂದೇ ದಿನ 25,462 ಹೊಸ ಪ್ರಕರಣ, 161 ಜನ ಸಾವು

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯಲ್ಲಿಂದು 25,462 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಸಕಾರಾತ್ಮಕತೆಯ ಪ್ರಮಾಣ ಶೇ 29.74ಕ್ಕೆ ಏರಿಕೆಯಾಗಿದೆ - ಅಂದರೆ ನಗರದಲ್ಲಿ ಪರೀಕ್ಷಿಸಲಾಗುತ್ತಿರುವ ಪ್ರತಿ ಮೂರನೇ ಒಂದು ಮಾದರಿಯು ಪಾಸಿಟಿವ್ ಆಗಿದೆ.

ಕಳೆದ 24 ಗಂಟೆಗಳಲ್ಲಿ ಈ ಸೋಂಕಿನಿಂದಾಗಿ 161 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಒಂದು ದಿನದ ಹಿಂದೆ ನಗರದಲ್ಲಿ 24,375 ಕೋವಿಡ್-19 ಪ್ರಕರಣಗಳು ಮತ್ತು 167 ಸಾವುಗಳು ವರದಿಯಾಗಿದ್ದವು.

ಹೊಸ ಪ್ರಕರಣಗಳೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 8,53,460ಕ್ಕೆ ಏರಿದೆ ಮತ್ತು ಸಾವಿನ ಸಂಖ್ಯೆ 12,121 ಆಗಿದೆ. ಏಪ್ರಿಲ್ 18ರ ವೇಳೆಗೆ 56,015 ಆರ್‌ಟಿ-ಪಿಸಿಆರ್ ಪರೀಕ್ಷೆಗಳು ಮತ್ತು 29,605 ಕ್ಷಿಪ್ರ ಆಂಟಿಜೆನ್ ಪರೀಕ್ಷೆಗಳು ಸೇರಿದಂತೆ ಒಟ್ಟು 85,620 ಜನರ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ದೆಹಲಿ ಹೆಲ್ತ್ ಬುಲೆಟಿನ್ ತಿಳಿಸಿದೆ.

ದೆಹಲಿಯಲ್ಲಿ ಈವರೆಗೆ 7.66 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹಿಂದಿನ ದಿನ 69,799 ರಿಂದ 74,941ಕ್ಕೆ ಏರಿದೆ. ಹೋಂ ಐಸೋಲೇಶನ್‌ನಲ್ಲಿರುವವ ಸಂಖ್ಯೆಯು ಶನಿವಾರ 32,156 ರಿಂದ 34,938ಕ್ಕೆ ಏರಿಕೆಯಾಗಿದೆ.

ಹಿಂದಿನ ದಿನ 11,235 ರಷ್ಟಿದ್ದ ಕಂಟೈನ್‌ಮೆಂಟ್ ವಲಯಗಳು 13,259ಕ್ಕೆ ಏರಿದೆ. ಸದ್ಯ ದೆಹಲಿಯಲ್ಲಿ ಕೊರೊನಾ ವೈರಸ್ ರೋಗಿಗಳಿಗೆ ಲಭ್ಯವಿರುವ 17,514 ಹಾಸಿಗೆಗಳಲ್ಲಿ 3,627 ಹಾಸಿಗೆಗಳು ಖಾಲಿ ಇವೆ ಎಂದು ತಿಳಿಸಿದೆ.

ಭಾನುವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ನಗರದಲ್ಲಿ 100 ಕ್ಕಿಂತ ಕಡಿಮೆ ಐಸಿಯು ಹಾಸಿಗೆಗಳು ಲಭ್ಯವಿವೆ ಎಂದು ಹೇಳಿದ್ದರು.

ಕೋವಿಡ್ ರೋಗಿಗಳಿಗಾಗಿ ದೆಹಲಿಯ 10,000 ದಲ್ಲಿ ಕನಿಷ್ಠ 7,000 ಕೇಂದ್ರ ಸರ್ಕಾರಿ ಆಸ್ಪತ್ರೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು