ಫ್ಯೂಚುರಾ ಷರೀಫ್, ಪಶ್ಚಿಮ ಬಂಗಾಳ: ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ಅವರು ಭಾನುವಾರ ಇಲ್ಲಿ ವಿವಿಧ ಮುಸ್ಲಿಂ ಮುಖಂಡರನ್ನು ಭೇಟಿಯಾಗಿದ್ದು, ರಾಜಕೀಯ ಬೆಳವಣಿಗೆಗಳನ್ನು ಕುರಿತು ಚರ್ಚಿಸಿದರು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ತಮ್ಮ ಪಕ್ಷವು ಸ್ಪರ್ಧಿಸಲಿದೆ ಎಂದು ಪ್ರಕಟಿಸಿದ ಬಳಿಕ ಇದು ಒವೈಸಿ ಅವರ ಪ್ರಥಮ ಭೇಟಿಯಾಗಿದೆ.

‘ಒವೈಸಿ ಈ ಭೇಟಿಯನ್ನು ಗೌಪ್ಯವಾಗಿ ಇಡಲು ಬಯಸಿದ್ದರು. ರಾಜ್ಯ ಸರ್ಕಾರ ತಮಗೆ ವಿಮಾನನಿಲ್ದಾಣದಿಂದ ಹೊರಬರಲು ಅವಕಾಶ ನೀಡದಿರಬಹುದು ಎಂಬ ಆತಂಕ ಇದಕ್ಕೆ ಕಾರಣ. ಕೋಲ್ಕತ್ತದಿಂದ ನೇರವಾಗಿ ಅವರು ಹೂಗ್ಲಿಗೆ ತೆರಳಿದ್ದು,ಅಲ್ಲಿಇ ಅಬ್ಬಾಸ್ ಸಿದ್ಧಿಖಿ ಅವರನ್ನು ಭೇಟಿಯಾಗುವರು’ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಜಮೀರುಲ್ ಹಸನ್ ತಿಳಿಸಿದರು.

ಇಲ್ಲಿನ ಫ್ಯೂಚುರಾ ಷರೀಫ್‌ನಲ್ಲಿ ಪಿರ್ಜಾದಾ (ಧಾರ್ಮಿಕ ಮುಖಂಡ) ಆಗಿರುವ ಸಿದ್ಧಿಖಿ, ಇತ್ತೀಚಿನ ವರ್ಷಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರೆ. ತಮ್ಮದೇ ನೇತೃತ್ವದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಂಘಟನೆ ಸ್ಥಾಪಿಸುವ ಗುರಿಯನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.