ಶುಕ್ರವಾರ, ಜೂನ್ 18, 2021
23 °C

ರೈಲ್ವೆಯಿಂದ 4,200 ಟನ್‌ ದ್ರವೀಕೃತ ಆಮ್ಲಜನಕ ಸಾಗಣೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ತೀವ್ರಗೊಂಡ ನಂತರ ಏ. 19 ರಿಂದ ಈ ವರೆಗೆ ಭಾರತೀಯ ರೈಲ್ವೆಯು ವಿವಿಧ ರಾಜ್ಯಗಳಿಗೆ ಒಟ್ಟು 4,200 ಟನ್‌ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ತಲುಪಿಸಿದೆ.

ಈ ಕಾರ್ಯಕ್ಕಾಗಿ ನಿಯೋಜನೆಗೊಂಡಿರುವ 68 ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’ಗಳು ದ್ರವೀಕೃತ ವೈದ್ಯಕೀಯ ಆಮ್ಲಜನಕವಿರುವ 268 ಟ್ಯಾಂಕರ್‌ಗಳನ್ನು ಸಾಗಿಸಿವೆ ಎಂದು ರೈಲ್ವೆಯು ಭಾನುವಾರ ಹೇಳಿದೆ.

ಮಹಾರಾಷ್ಟ್ರಕ್ಕೆ 293 ಟನ್‌, ಉತ್ತರ ಪ್ರದೇಶಕ್ಕೆ 1,230 ಟನ್‌, ಮಧ್ಯಪ್ರದೇಶಕ್ಕೆ 271 ಟನ್‌, ಹರಿಯಾಣ– 555 ಟನ್‌, ತೆಲಂಗಾಣ– 123, ರಾಜಸ್ಥಾನ–40 ಹಾಗೂ ದೆಹಲಿಗೆ 1,679 ಟನ್‌ ಆಮ್ಲಜನಕ ತಲುಪಿಸಲಾಗಿದೆ ಎಂದೂ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು