ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕೋವಾಕ್ಸಿನ್ ಪ್ರಯೋಗ ಪೂರ್ಣ: ಕೃಷ್ಣ ಎಲ್ಲ

Last Updated 21 ಸೆಪ್ಟೆಂಬರ್ 2021, 14:40 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಭಾರತ್ ಬಯೋಟೆಕ್ ಕೋವಿಡ್ -19 ಲಸಿಕೆಯ 2/3 ಹಂತದ ಪ್ರಯೋಗಗಳನ್ನು ಪೂರ್ಣಗೊಳಿಸಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಕೋವಾಕ್ಸಿನ್ ನೀಡಲು ಮುಂದಿನ ವಾರದೊಳಗೆ ಡಿಸಿಜಿಐಗೆ ದತ್ತಾಂಶ ಸಲ್ಲಿಸುವ ನಿರೀಕ್ಷೆಯಿದೆ ಎಂದು ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲ ಮಂಗಳವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಕೋವಾಕ್ಸಿನ್ 2/3 ಹಂತದ ಪ್ರಯೋಗಗಳನ್ನು ಪೂರ್ಣಗೊಳಿಸಿದೆ. ದತ್ತಾಂಶದ ವಿಶ್ಲೇಷಣೆ ನಡೆಯುತ್ತಿದೆ. ಮುಂದಿನ ವಾರದೊಳಗೆ ನಾವು ದತ್ತಾಂಶವನ್ನು ನಿಯಂತ್ರಕರಿಗೆ ಸಲ್ಲಿಸುತ್ತೇವೆ ಎಂದರು.

ಕೋವಿಡ್‌ 19 ವಿರುದ್ಧ ನಮ್ಮ ಸಂಸ್ಥೆ ತಯಾರಿಸಿರುವ ಇಂಟ್ರಾನಾಸಲ್ ಲಸಿಕೆಯ 2ನೇ ಹಂತದ ಪ್ರಯೋಗಗಳು ಮುಂದಿನ ತಿಂಗಳ ವೇಳೆಗೆ ಮುಗಿಯುವ ನಿರೀಕ್ಷೆಯಿದೆ ಎಂದು ಎಲ್ಲಾ ಹೇಳಿದರು.

ಇಂಟ್ರಾನಾಸಲ್ ಇಮ್ಯುನೈಸೇಶನ್ ಮೂಗಿನಲ್ಲಿ ಪ್ರತಿರಕ್ಷಣೆ ಸೃಷ್ಟಿಸಲಿದೆ. ಮೂಗು ವೈರಸ್‌ ಪ್ರವೇಶದ ಪ್ರಮುಖ ಮಾರ್ಗವಾಗಿದ್ದು, ಇಂಟ್ರಾನಾಸಲ್‌ ಸೋಂಕು ಪ್ರವೇಶ ಮತ್ತು ಹರಡುವಿಕೆ ತಡೆಯುತ್ತದೆ. ಇದನ್ನು ಸುಮಾರು 650 ಸ್ವಯಂಸೇವಕರ ಮೇಲೆ ಪ್ರಯೋಗ ನಡೆಸಲಾಗುವುದು ಎಂದು ಅವರು ಹೇಳಿದರು.

ಭಾರತ್ ಬಯೋಟೆಕ್ ಭಾರತೀಯ ಇಮ್ಯುನೊಲಾಜಿಕ್ಲಾಸ್ ಮತ್ತು ಹೆಸ್ಟರ್ ಬಯೋಸೈನ್ಸ್ ಜೊತೆಗೂಡಿ ಕೊವಾಕ್ಸಿನ್ ತಯಾರಿಸುತ್ತಿದೆ. ಬೆಂಗಳೂರಿನಲ್ಲಿ ಉತ್ಪಾದನೆ ಬಹಳ ವೇಗವಾಗಿ ನಡೆಯುತ್ತಿದೆ. ಲಸಿಕೆ ತಯಾರಿಕೆ ಪ್ರಮಾಣ ಸೆಪ್ಟೆಂಬರ್‌ ಅಂತ್ಯಕ್ಕೆ 3.50 ಕೋಟಿ ಡೋಸ್‌ಗೆ ತಲುಪಲಿದ್ದು, ಅಕ್ಟೋಬರ್‌ನಲ್ಲಿ 5.50 ಕೋಟಿ ಡೋಸ್‌ಗೆ ಏರಲಿದೆ ಎಂದು ಕೃಷ್ಣ ಎಲ್ಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT