ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಗಿಸಿದ ಪಾಕ್‌

Last Updated 13 ಡಿಸೆಂಬರ್ 2020, 6:53 IST
ಅಕ್ಷರ ಗಾತ್ರ

ಜಮ್ಮು: ಜಮ್ಮು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಯೋಧರು ಕಥುವಾ ಜಿಲ್ಲೆಯ ಗಡಿಯುದ್ದಕ್ಕೂ ಇರುವ ಹಳ್ಳಿಗಳ ಮೇಲೆ ಶನಿವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿರಾನ್‌ನಗರ್‌ ಸೆಕ್ಟೆರ್‌ನ ಪನ್ಸಾರ್ ಗಡಿಯ ಔಟ್‌ಪೋಸ್ಟ್ ಪ್ರದೇಶದಲ್ಲಿರುವ ಗಡಿಯುದ್ಧಕ್ಕೂ ಪಾಕಿಸ್ತಾನ ಪಡೆಗಳು ಶನಿವಾರ ರಾತ್ರಿ 10 ಗಂಟೆಯಿಂದ ಗುಂಡಿನ ದಾಳಿ ಆರಂಭಿಸಿದ್ದಾರೆ. ಪಾಕ್ ದಾಳಿಗೆ ಭಾರತದ ಗಡಿ ಭದ್ರತಾ ಪಡೆಯ ಯೋಧರು ಪರಿಣಾಮಕಾರಿಯಾಗಿ ಪ್ರತಿದಾಳಿ ಮೂಲಕ ಉತ್ತರ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ 10ಕ್ಕೆ ಆರಂಭವಾದ ಎರಡೂ ಕಡೆಯ ಗಡಿಯಾಚೆಗಿನವರೆಗಿನ ಗುಂಡಿನ ದಾಳಿ ಭಾನುವಾರ ಮುಂಜಾನೆ 3.45 ರವರೆಗೆ ಮುಂದುವರಿದಿತ್ತು. ಗಡಿಯಲ್ಲಿರುವ ನಿವಾಸಿಗಳಿಗೆ ಭೂಗತ ಬಂಕರ್‌ಗಳಲ್ಲಿ ರಾತ್ರಿ ಕಳೆಯುವಂತೆ ತಿಳಿಸಲಾಯಿತು.

ಭಾರತದ ಕಡೆಯಿಂದ ನಡೆದ ಗುಂಡಿನ ದಾಳಿಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT