ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಸರ್ಕಾರದ ಟ್ವಿಟರ್‌ ಖಾತೆಗೆ ಭಾರತದಲ್ಲಿ ನಿರ್ಬಂಧ

ಕಾನೂನು ಬೇಡಿಕೆಯಿಂದಾಗಿ ಖಾತೆಗೆ ತಡೆ
Last Updated 30 ಮಾರ್ಚ್ 2023, 2:55 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನ ಸರ್ಕಾರದ ಟ್ವಿಟರ್‌ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಕಾನೂನು ಬೇಡಿಕೆಯಿಂದಾಗಿ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಎನ್ನುವ ಸಂದೇಶ ಕಾಣಿಸುತ್ತಿದೆ.

@GovtofPakistan ಎನ್ನುವ ಖಾತೆಯು ಭಾರತದ ಬಳಕೆದಾರರಿಗೆ ಕಾಣಿಸುತ್ತಿಲ್ಲ.

ಪಾಕಿಸ್ತಾನದ ಟ್ವಿಟರ್ ಖಾತೆ ಭಾರತದಲ್ಲಿ ತಡೆಹಿಡಿಯಲಾಗುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ 2022 ಜುಲೈ ಹಾಗೂ ಅಕ್ಟೋಬರ್‌ನಲ್ಲಿ ಖಾತೆಯನ್ನು ತಡೆಹಿಡಿಯಲಾಗಿತ್ತು.

ಟ್ವಿಟರ್‌ನ ನಿಯಮ ಪ್ರಕಾರ ಕೋರ್ಟ್‌ ಆದೇಶದ ಅನ್ವಯ ಯಾರಾದರೂ ಕಾನೂನು ಬೇಡಿಕೆ ಇಟ್ಟರೆ ಖಾತೆಯನ್ನು ತಡೆಹಿಡಿಯಲಾಗುತ್ತದೆ.

2022ರ ಜೂನ್‌ ತಿಂಗಳಿನಲ್ಲಿ ಅಮೆರಿಕ, ಟರ್ಕಿ, ಇರಾನ್‌ ಹಾಗೂ ಈಜಿಪ್ಟ್‌ಗಳಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿ ಟ್ವಿಟರ್‌ ಖಾತೆಗೆ ನಿರ್ಬಂಧ ವಿಧಿಸಲಾಗಿತ್ತು.

2021ರ ಮಾಹಿತಿ ತಂತ್ರಜ್ಞಾನ ನಿಯಮದಡಿ ಇರುವ ತುರ್ತು ಅಧಿಕಾರನ್ನು ಬಳಸಿ ಟ್ವಿಟರ್‌ ಖಾತೆಯನ್ನು ತಡೆಹಿಡಿಯಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT