ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನ್ಸರೆ ಹತ್ಯೆ ತನಿಖೆ ಎಟಿಎಸ್‌ಗೆ ವರ್ಗಾಯಿಸಲು ಆಕ್ಷೇಪವಿಲ್ಲ: ಎಸ್‌ಐಟಿ

Last Updated 1 ಆಗಸ್ಟ್ 2022, 16:54 IST
ಅಕ್ಷರ ಗಾತ್ರ

ಮುಂಬೈ: ‘ಹೋರಾಟಗಾರ ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದ ತನಿಖೆಯನ್ನು ಭಯೋತ್ಪಾದನಾ ನಿಗ್ರಹ ಘಟಕಕ್ಕೆ (ಎಟಿಎಸ್‌) ಹಸ್ತಾಂತರಿಸಲು ತನ್ನ ಆಕ್ಷೇಪವಿಲ್ಲ’ ಎಂದುಮಹಾರಾಷ್ಟ್ರದ ಅಪರಾಧ ತನಿಖಾ ಘಟಕ, ಬಾಂಬೆ ಹೈಕೊರ್ಟ್‌ಗೆ ತಿಳಿಸಿದೆ.

ಪಾನ್ಸರೆ ಕುಟುಂಬ ಸದಸ್ಯರ ಅರ್ಜಿ ಆಧರಿಸಿ ಹೈಕೋರ್ಟ್‌ ನೀಡಿದ್ದ ಆದೇಶದಂತೆ ಸಿಐಡಿಯ ವಿಶೇಷ ತನಿಖಾ ತಂಡವನ್ನು ಹತ್ಯೆ ಪ್ರಕರಣದ ತನಿಖೆಗೆ ರಚಿಸಲಾಗಿತ್ತು. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 2015ರ ಫೆಬ್ರುವರಿಯಲ್ಲಿ ಪಾನ್ಸರೆ ಹತ್ಯೆಯಾಗಿತ್ತು.

ಹತ್ಯೆ ನಡೆದು ಏಳು ವರ್ಷ ಗತಿಸಿದರೂ ಎಸ್ಐಟಿ ತನಿಖೆಯಲ್ಲಿ ಪ್ರಗತಿಯಾಗಿಲ್ಲ. ತನಿಖೆಯನ್ನು ಎಟಿಎಸ್‌ಗೆ ಹಸ್ತಾಂತರಿಸಬೇಕು ಎಂದು ಪಾನ್ಸರೆ ಕುಟುಂಬದ ಸದಸ್ಯರು ಸೋಮವಾರ ಕೋರ್ಟ್‌ಗೆ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಪ್ರಕರಣವನ್ನು ಹಸ್ತಾಂತರಿಸಲು ತನ್ನ ಆಕ್ಷೇಪವಿಲ್ಲ ಎಂಬ ಪತ್ರವನ್ನು ಎಸ್‌ಐಟಿ ಪರ ವಕೀಲರು ಕೋರ್ಟ್‌ಗೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT