ಬುಧವಾರ, ಜನವರಿ 26, 2022
25 °C

ಉಚಿತ ಪಡಿತರ ವಿತರಣೆಯನ್ನು ಇನ್ನೂ 8 ತಿಂಗಳು ವಿಸ್ತರಿಸಿ: ಮೋದಿಗೆ ಪಟ್ನಾಯಕ್‌ ಪತ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ, ಒಡಿಶಾ: ರಾಷ್ಟ್ರೀಯ ಆಹಾರ ಭದ್ರತೆ ಕಾರ್ಯಕ್ರಮದ ಫಲಾನುಭವಿಗಳಿಗೆ  ಉಚಿತ ಅಕ್ಕಿಯ ವಿತರಣೆಯನ್ನು ಹೆಚ್ಚುವರಿಯಾಗಿ ಇನ್ನೂ ಎಂಟು ತಿಂಗಳ ಕಾಲ ವಿಸ್ತರಿಸಬೇಕು ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ. 

‘ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಉಚಿತವಾಗಿ ಪಡಿತರವನ್ನು ಒದಗಿಸುವುದರಿಂದ ಯಾವ ಒಬ್ಬ ನಿರ್ಗತಿಕ ಮತ್ತು ದುರ್ಬಲ ವ್ಯಕ್ತಿಯೂ ಆಹಾರ ಧಾನ್ಯಗಳಿಂದ ವಂಚಿತರಾಗುವುದಿಲ್ಲ’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ಕೋವಿಡ್‌ ಪರಿಸ್ಥಿತಿ ಸುಧಾರಿಸುವವರೆಗೆ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ (ಪಿಎಂಜಿಕೆಎವೈ) ಹೆಚ್ಚುವರಿ ಅಕ್ಕಿಯ ಹಂಚಿಕೆಯನ್ನು ವಿಸ್ತರಿಸುವಂತೆ ಪ್ರಧಾನಿ ಮೋದಿ ಅವರನ್ನು ಪಟ್ನಾಯಕ್‌ ಒತ್ತಾಯಿಸಿದ್ದಾರೆ.   

ಪಿಎಂಜೆಕೆವೈ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಕೇಂದ್ರ ಸರ್ಕಾರ 80 ಕೋಟಿ ಫಲಾನುಭವಿಗಳಿಗೆ ಉಚಿತ ಪಡಿತರ ಪೂರೈಸುತ್ತಿದೆ. 

ಕೋವಿಡ್‌ ಸಾಂಕ್ರಾಮಿಕದ ಆರಂಭದಲ್ಲಿ ಪಿಎಂಜಿಕೆವೈ ಯೋಜನೆಯಡಿ ಮೂರು ತಿಂಗಳು (ಏಪ್ರಿಲ್‌–ಜೂನ್‌ 2020) ಉಚಿತ ಪಡಿತರ ನೀಡಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು