ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಚಲಾಯಿಸಲು ಗೋವಾಗೆ ಆಗಮಿಸುತ್ತಿರುವ ಬಂಗಾಲಿಗಳ ವಿಡಿಯೊ ನಕಲಿ: ಟಿಎಂಸಿ

Last Updated 8 ಡಿಸೆಂಬರ್ 2021, 7:00 IST
ಅಕ್ಷರ ಗಾತ್ರ

ಕೋಲ್ಕತ್ತ: 2022ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಪರ ಮತ ಚಲಾಯಿಸಲು ಜನರು ಪಶ್ಚಿಮ ಬಂಗಾಳದಿಂದ ರೈಲಿನ ಮೂಲಕ ಗೋವಾಗೆ ಆಗಮಿಸುತ್ತಿದ್ದಾರೆ ಎಂದು ಆರೋಪಿಸಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ.

ವೈರಲ್‌ ಆಗಿರುವ ವಿಡಿಯೊ ನಕಲಿ ಎಂದು ಟಿಎಂಸಿ ನಾಯಕ ತ್ರಜನೊ ಡಿಮೆಲ್ಲೊ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹಂಚಿಕೆಯಾಗುತ್ತಿರುವ ವಿಡಿಯೊ ನಿಜವಾದದ್ದು ಎಂದೆನಿಸಿದರೆ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳಲಿ. ಬಿಜೆಪಿ ಮತ್ತು ಅದರ ಐಟಿ ಸೆಲ್‌ ನಕಲಿ ವಿಡಿಯೊ ಹರಿಯಬಿಡುವ ಮೂಲಕ ಅಪಪ್ರಚಾರ ಮಾಡುತ್ತಿದೆ. ಈ ಮೂಲಕ ಚುನಾವಣಾ ಆಯೋಗಕ್ಕೆ ಅಗೌರವಿಸಲಾಗುತ್ತಿದೆ ಎಂದರು.

ನಕಲಿ ವಿಡಿಯೊವನ್ನು ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡುತ್ತಿದ್ದಾರೆ. ಬಿಜೆಪಿಗೆ ತನ್ನನ್ನು ಮಾರಿಕೊಂಡಿರುವ ಕಾಂಗ್ರೆಸ್‌ ಕೂಡ ಇದೇ ಕೆಲಸ ಮಾಡುತ್ತಿದೆ. ಎಂಜಿಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಟಿಎಂಸಿಯಿಂದ ಆಡಳಿತ ಪಕ್ಷಕ್ಕೆ ನಡುಕ ಶುರುವಾಗಿದೆ. ಹಾಗಾಗಿ ಇಂತಹ ನಕಲಿ ವಿಡಿಯೊಗಳು ಹುಟ್ಟಿಕೊಳ್ಳುತ್ತಿವೆ ಎಂದು ಟಿಎಂಸಿ ನಾಯಕ ಹೇಳಿದರು.

ಪೊಂಡದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ವೈರಲ್‌ ಆಗಿರುವ ವಿಡಿಯೊ ಬಗ್ಗೆ ಮಾತನಾಡಿದ್ದಾರೆ. ಪಶ್ಚಿಮ ಬಂಗಾಳದಿಂದ ಪ್ರತಿದಿನ 500 ಮಂದಿ ಗೋವಾಗೆ ಆಗಮಿಸುತ್ತಿದ್ದಾರೆ. ತಿಂಗಳಿಗೆ ₹500 ಕೊಟ್ಟು ಒಂದು ಪಕ್ಷದ ಪರವಾಗಿ ಮತ ಚಲಾಯಿಸಲು ಮನವೊಲಿಸಿ ಕರೆದುಕೊಂಡು ಬರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮುಂಬರುವ ಗೋವಾ ಚುನಾವಣೆಯಲ್ಲಿ ಮತ ಚಲಾಯಿಸಲು ತಮ್ಮನ್ನು ಕರೆದುಕೊಂಡು ಹೋಗುತ್ತಿರುವುದಾಗಿ ಕೆಲವು ಯುವಕರು ಹೇಳುತ್ತಿರುವುದು ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT