ಸೋಮವಾರ, ಮಾರ್ಚ್ 1, 2021
24 °C

ಇಂಡಿಯಾ ಗೇಟ್ ಬಳಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರವಾಸಿಗರು!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಲ್ಲಿನ ಖಾನ್‌ ಮಾರ್ಕೆಟ್‌ ಮೆಟ್ರೊ ನಿಲ್ದಾಣದ ಬಳಿ ಭಾನುವಾರ ಬೆಳಿಗ್ಗೆ ಆರು ಮಂದಿ ‘ಪಾಕಿಸ್ತಾನ ಜಿಂದಾಬಾದ್‌’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಖಾನ್‌ ಮಾರ್ಕೆಟ್‌ ಮೆಟ್ರೊ ನಿಲ್ದಾಣದ ಬಳಿ ಕೆಲವು ಮಂದಿ ‘ಪಾಕಿಸ್ತಾನ ಜಿಂದಾಬಾದ್‌’ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ತುಘಲಕ್‌ ರಸ್ತೆ ಪೊಲೀಸ್‌ ಠಾಣೆಗೆ ಪಿಸಿಆರ್‌ನಿಂದ ಮಾಹಿತಿ ಲಭಿಸಿದೆ. ಈ ಕೂಡಲೇ ತಂಡವೊಂದು ಸ್ಥಳಕ್ಕೆ ಧಾವಿಸಿತು. ಆಗ ಅಲ್ಲಿ ಮೂರು ಮಹಿಳೆಯರು, ಇಬ್ಬರು ಯುವಕರು ಸೇರಿದಂತೆ ಆರು ಮಂದಿ ಯೂಲ್‌ ಬೈಕ್‌ನಲ್ಲಿ ಇದ್ದರು’ ಎಂದು ಅವರು ಮಾಹಿತಿ ನೀಡಿದರು.

‘ಯೂಲ್‌ ಬೈಕ್‌ ಮೂಲಕ ಇಂಡಿಯಾ ಗೇಟ್‌ ನೋಡಲು ಬಂದಿದ್ದೆವು. ಈ ವೇಳೆ ಬೈಕ್‌ ರೇಸ್‌ ಮಾಡಿದ್ದೇವೆ. ಆಗ ಎದುರಾಳಿಗಳನ್ನು ವಿವಿಧ ದೇಶಗಳ ಹೆಸರಿನಲ್ಲಿ ಕರೆಯುತ್ತಿದ್ದೆವು. ಈ ಸಂದರ್ಭದಲ್ಲಿ ಹಗುರುವಾದ ಧಾಟಿಯಲ್ಲಿ ‘ಪಾಕಿಸ್ತಾನ ಜಿಂದಾಬಾದ್‌’ ಹೇಳಿದ್ದೇವೆ’ ಎಂದು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಈ ಬಗ್ಗೆ ತನಿಖೆ ಮುಂದುವರಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು