ಭಾನುವಾರ, ಜನವರಿ 17, 2021
27 °C

ಮಧ್ಯಪ್ರದೇಶ: ಚಿನ್ನ–ಬೆಳ್ಳಿ ನಾಣ್ಯಕ್ಕಾಗಿ ಮುಗಿಬಿದ್ದ ಗ್ರಾಮಸ್ಥರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಾಜ್‌ಘಡ (ಮಧ್ಯಪ್ರದೇಶ): ಪ್ರಾಚೀನ ಕಾಲದ ಚಿನ್ನ ಮತ್ತು ಬೆಳ್ಳಿ ನಾಣ್ಯಕ್ಕಾಗಿ ಪಾರ್ವತಿ ನದಿಯ ಪಾತ್ರದ ಬಳಿ ಜನರು ಮುಗಿಬಿದ್ದಿದ್ದಾರೆ. ಅಲ್ಲದೆ ನದಿ ಪಾತ್ರವನ್ನು ಅಗೆಯುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಮಧ್ಯಪ್ರದೇಶದ ರಾಜ್‌ಘಡ ಜಿಲ್ಲೆಯ ಶಿವಪುರ ಗ್ರಾಮದ ಬಳಿಯಿರುವ ಪಾರ್ವತಿ ನದಿಯಲ್ಲಿ ಪ್ರಾಚೀನ ಕಾಲದ ಚಿನ್ನ ಮತ್ತು ಬೆಳ್ಳಿ ನಾಣ್ಯಗಳಿವೆ ಎಂಬ ಗಾಳಿಸುದ್ದಿ ಗ್ರಾಮದೆಲ್ಲೆಡೆ ಹಬ್ಬಿದೆ.

‘ಗಾಳಿ ಸುದ್ದಿಗೆ ಕಿವಿಗೊಟ್ಟು, ಜನರು ಇಲ್ಲಿ ಸೇರತೊಡಗಿದ್ದಾರೆ. ಆದರೆ ಈವರೆಗೆ ಯಾರೊಬ್ಬರಿಗೂ ಒಂದು ನಾಣ್ಯವೂ ಸಿಕ್ಕಿಲ್ಲ’ ಎಂದು ಕುರಾವರ್‌ನ ವರಿಷ್ಠ ಪೊಲೀಸ್‌ ಅಧಿಕಾರಿ ರಾಮನರೇಶ್ ರಾಥೋಡ್ ಅವರು ಹೇಳಿದರು.

‘ನಾನು ಎರಡು ಗಂಟೆಗಳ ಕಾಲ ನದಿಯ ಬಳಿಯೇ ನಿಂತಿದ್ದೆ. ನದಿಯನ್ನು ಅಗೆಯಬೇಡಿ ಎಂದು ಮನವಿ ಮಾಡಿದೆ. ಅವರಿಗೆ ಈವರೆಗೂ ಒಂದೇ ಒಂದು ನಾಣ್ಯ ಸಿಕ್ಕಿಲ್ಲ. ಆದರೂ ನಾಣ್ಯಕ್ಕಾಗಿ ನದಿಪಾತ್ರ ಅಗೆಯುವವರ ಸಂಖ್ಯೆಯಲ್ಲಿ ಮಾತ್ರ ಏರಿಕೆಯಾಗುತ್ತಿದೆ. ಈ ಗಾಳಿಸುದ್ದಿಯನ್ನು ಯಾರು ಹಬ್ಬಿಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು