ಬುಧವಾರ, ಜುಲೈ 28, 2021
28 °C

ಜಲಗಾಂವ್‌ನಲ್ಲಿ ತರಬೇತಿ ವಿಮಾನ ಪತನ: ಬೆಂಗಳೂರಿನ ಪೈಲಟ್ ಸಾವು

ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಚೋಪ್ಡಾ ಬಳಿ ಶುಕ್ರವಾರ ತರಬೇತಿ ವಿಮಾನ ಪತನಗೊಂಡು ಪೈಲಟ್ ತರಬೇತುದಾರ, ಬೆಂಗಳೂರಿನ ನೂರುಲ್ ಅಮೀನ್ (28) ಮೃತಪಟ್ಟಿದ್ದಾರೆ.

ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್, ಮಧ್ಯ ಪ್ರದೇಶದ ಅನಿಷ್ಕಾ ಗುರ್ಜರ್ ಗಾಯಗೊಂಡಿದ್ದಾರೆ. ಇವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರ್ಜರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎರಡು ಆಸನಗಳ ಇಟಲಿ ನಿರ್ಮಿತ ತರಬೇತಿ ವಿಮಾನವು ಧುಲೆ ನಗರದ ಶಿರ್‌ಪುರದಲ್ಲಿರುವ ಎನ್‌ಎಂಐಎಂಎಸ್ ಅಕಾಡೆಮಿಗೆ ಸೇರಿದ್ದು ಎನ್ನಲಾಗಿದೆ. ವಿಮಾನವು ಶಿರ್‌ಪುರದಿಂದ ಟೇಕಾಫ್‌ ಆಗಿತ್ತು.

‘ನಾವೊಬ್ಬ ಪೈಲಟ್‌ನನ್ನು ಕಳೆದುಕೊಂಡಿದ್ದೇವೆ ಹಾಗೂ ತರಬೇತಿ ಪಡೆಯುತ್ತಿದ್ದ ಪೈಲಟ್ ಗಾಯಗೊಂಡಿದ್ದಾರೆ’ ಎಂದು ಎನ್‌ಎಂಐಎಂಎಸ್ ವಿಮಾನಯಾನ ತರಬೇತಿ ಸಂಸ್ಥೆಯ ನಿರ್ದೇಶಕ ಹಿತೇಶ್ ಪಟೇಲ್ ‘ಡೆಕ್ಕನ್ ಹೆರಾಲ್ಡ್’ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ನಾಗರಿಕ ವಿಮಾಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ತನಿಖಾ ತಂಡ ಸ್ಥಳಕ್ಕೆ ತೆರಳಿದೆ ಎಂದು ತಿಳಿಸಿದ್ದಾರೆ.

ವಿಮಾನ ಪತನಕ್ಕೆ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು