ಶುಕ್ರವಾರ, ಅಕ್ಟೋಬರ್ 23, 2020
24 °C

ಆ್ಯಪ್‌ ಸ್ಟೋರ್‌ಗಳೂ ತಟಸ್ಥವಾಗಿರಬೇಕು: ಶರ್ಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆ್ಯಪ್‌ ಸ್ಟೋರ್‌ಗಳು, ಮೊಬೈಲ್ ಕಾರ್ಯಾಚರಣೆ ವ್ಯವಸ್ಥೆಗಳು (ಆಪರೇಟಿಂಗ್ ಸಿಸ್ಟಂ) ಕೂಡ ತಟಸ್ಥವಾಗಿ ಇರಬೇಕಾದುದು ಮಹತ್ವದ್ದು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷ ಆರ್.ಎಸ್. ಶರ್ಮ ಹೇಳಿದ್ದಾರೆ. 

ಸ್ಮಾರ್ಟ್‌ ಉಪಕರಣಗಳು, ಕಾರ್ಯಾಚರಣೆ ವ್ಯವಸ್ಥೆಗಳು ಮತ್ತು ಡಿಜಿಟಲ್ ವೇದಿಕೆಗಳು ತಮಗೆ ತೋಚಿದ ರೀತಿಯಲ್ಲಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಬಾರದು ಎಂದಾದರೆ, ಅವು ತಟಸ್ಥವಾಗಿ ಕಾರ್ಯ ನಿರ್ವಹಿಸಬೇಕಿರುವುದು ಅವಶ್ಯಕ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವು ತಟಸ್ಥವಾಗಿ ಕೆಲಸ ಮಾಡುವಂತೆ ಟ್ರಾಯ್‌ ನಿಗಾ ವಹಿಸಬೇಕೋ ಅಥವಾ ಇತರ ಯಾವುದಾದರೂ ಸಂಸ್ಥೆ ಅದನ್ನು ನೋಡಿಕೊಳ್ಳಬೇಕೋ ಎಂಬುದನ್ನು ತಾವು ಸೂಚಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶರ್ಮ ಅವರ ಅಧಿಕಾರ ಅವಧಿಯು ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ.

‘ಕಾರ್ಯಾಚರಣೆ ವ್ಯವಸ್ಥೆಗಳು, ಸ್ಮಾರ್ಟ್‌ ಸಾಧನಗಳು ತಟಸ್ಥವಾಗಿ ಇಲ್ಲವಾದರೆ, ಅವು ತಾವೇ ಕೆಲವು ನಿಯಂತ್ರಣ ಕ್ರಮಗಳನ್ನು ಹೇರುವ ಕೆಲಸ ಆರಂಭಿಸಿಬಿಡಬಹುದು’ ಎಂದು ಎಚ್ಚರಿಸಿದ್ದಾರೆ. ದೂರಸಂಪರ್ಕ ಕ್ಷೇತ್ರದಲ್ಲಿ ‘ತಟಸ್ಥ ಅಂತರ್ಜಾಲ’ ನೀತಿ ಜಾರಿಯಲ್ಲಿ ಇರುವ ಕಾರಣ ಸೇವಾದಾತರು ಯಾವುದೇ ಜಾಲತಾಣಗಳನ್ನು ನಿರ್ಬಂಧಿಸುವಂತಿಲ್ಲ ಅಥವಾ ನಿರ್ದಿಷ್ಟ ಇಂಟರ್ನೆಟ್ ತಾಣಗಳಿಗೆ ಹೆಚ್ಚಿನ ವೇಗದ ಸಂಪರ್ಕ ಒದಗಿಸುವಂತೆಯೂ ಇಲ್ಲ.

ತಟಸ್ಥ ಅಂತರ್ಜಾಲ ವಿಚಾರವಾಗಿ ಟ್ರಾಯ್ ನೀಡಿದ್ದ ಶಿಫಾರಸುಗಳನ್ನು ಕೇಂದ್ರವು ತುಸು ಬದಲಾವಣೆಗಳೊಂದಿಗೆ ಒಪ್ಪಿಕೊಂಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು