ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಂಜೊ ಅಬೆ ನಿಧನ: ನಾಳೆ ದೇಶದಾದ್ಯಂತ ಶೋಕಾಚರಣೆ ಘೋಷಿಸಿದ ಪ್ರಧಾನಿ ಮೋದಿ

Last Updated 8 ಜುಲೈ 2022, 10:23 IST
ಅಕ್ಷರ ಗಾತ್ರ

ನವದೆಹಲಿ: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ ಒಂದು ದಿನ ದೇಶದಾದ್ಯಂತ ಶೋಕಾಚರಣೆ ಘೋಷಿಸಿದ್ದಾರೆ.

ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಒಪ್ಪಂದದ ಹಂತದಲ್ಲಿ ಭಾರತ ಮತ್ತು ಜಪಾನ್ ಬಾಂಧವ್ಯ ವೃದ್ಧಿಗೆ ಶಿಂಜೊ ಅಬೆ ಅವರ ಕೊಡುಗೆ ಅಪಾರ. ಇಂದು ಜಪಾನ್ ಜೊತೆ ಸಂಪೂರ್ಣ ಭಾರತ ಶೋಕಾಚರಣೆ ಮಾಡುತ್ತಿದೆ. ಕಠಿಣಸಂದರ್ಭಗಳಲ್ಲಿ ನಾವು ಜಪಾನ್‌ನಸಹೋದರ ಮತ್ತು ಸಹೋದರಿಯರ ಜೊತೆ ನಿಂತಿರುತ್ತೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಟೋಕಿಯೊದಲ್ಲಿ ನನ್ನ ಆತ್ಮೀಯ ಗೆಳೆಯ ಶಿಂಜೊ ಅಬೆ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಭಾರತ ಮತ್ತು ಜಪಾನ್ ನಡುವಿನ ಸಂಬಂಧ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಯಾವಾಗಲೂ ಅವರು ಉತ್ಸುಕರಾಗಿದ್ದರು. ಇತ್ತೀಚೆಗೆ, ಭಾರತ–ಜಪಾನ್ ಅಸೋಸಿಯೇಶನ್‌ನ ಅಧ್ಯಕ್ಷರ ಹುದ್ದೆ ಅಲಂಕರಿಸಿದ್ದರು ಎಂದು ಪ್ರಧಾನಿ ಮೋದಿ ಚಿತ್ರದ ಜೊತೆ ಟ್ವೀಟ್ ಮಾಡಿದ್ದಾರೆ.

ಜಪಾನ್ ಮತ್ತು ಜಗತ್ತನ್ನು ಅತ್ಯುತ್ತಮ ಪ್ರದೇಶವನ್ನಾಗಿ ರೂಪಿಸಲು ಶಿ'ಜೊ ಅಬೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಜಗತ್ತಿನ ಅತ್ಯುತ್ತಮ ರಾಜಕೀಯ ಮುತ್ಸದ್ಧಿ ಮತ್ತು ಗಮನಾರ್ಹ ಆಡಳಿತಗಾರ ಎಂದು ಮೋದಿ ಬಣ್ಣಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT