ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿ ಭಾಷಣ: ಲಾಕ್‌ಡೌನ್‌ ಮುಗಿದಿದೆ, ಕೊರೊನಾ ವೈರಸ್‌ ದೇಶದಿಂದ ಹೋಗಿಲ್ಲ...
LIVE

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಜೆ 6 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
Last Updated 20 ಅಕ್ಟೋಬರ್ 2020, 14:55 IST
ಅಕ್ಷರ ಗಾತ್ರ
12:4720 Oct 2020

ನಾವೆಲ್ಲರೂ ಸೇರಿ ದೇಶವನ್ನು ಮುನ್ನಡೆಸೋಣ. ನವರಾತ್ರಿ, ದಸರಾ, ಈದ್, ದೀಪಾವಳಿ, ಷಟ್‌ಪೂಜಾ, ಗುರುನಾನಕ್ ಜಯಂತಿ ಸೇರಿದಂತೆ ಎಲ್ಲ ಹಬ್ಬಗಳ ಶುಭಾಶಯ ಕೋರುತ್ತೇನೆ. ಧನ್ಯವಾದಗಳು.

12:4620 Oct 2020

ನಾನು ನಿಮಗೆ ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ. ನೀವು ಸುರಕ್ಷಿತವಾಗಿರಬೇಕೆಂದು ನಾನು ಬಯಸುತ್ತೇನೆ. ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರಲ್ಲಿ ವಿನಂತಿಸುತ್ತೇನೆ; ದಯವಿಟ್ಟು ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ಜನಜಾಗರಣ ಅಭಿಯಾನ ನಡೆಸಿ.

12:4520 Oct 2020

ಕೊರೊನಾ ವಿಚಾರದಲ್ಲಿಯೂ ಈ ಮಾತು ನಿಜ. ಔಷಧಿ ಬರುವವರೆಗೆ ಅಪಾಯ ತಪ್ಪಿದ್ದಲ್ಲ. ಎಚ್ಚರಗೇಡಿತನವು ನಮ್ಮ ಖುಷಿಯನ್ನು ನುಂಗಿಹಾಕಬಹುದು. ಎರಡು ಗಜ (6 ಅಡಿ) ಅಂತರ, ಆಗಿದ್ದಾಂಗ್ಗೆ ಸಾಬೂನಿನಿಂದ ಕೈತೊಳೆಯುವುದು, ಮಾಸ್ಕ್ ಹಾಕುವುದನ್ನು ಮರೆಯಬೇಡಿ.

12:4420 Oct 2020

ರಾಮಚರಿತಮಾನಸದಲ್ಲಿ ಒಂದು ಒಳ್ಳೇ ಮಾತಿದೆ. 'ಅಗ್ನಿ, ಶತ್ರು, ರೋಗದ ವಿಚಾರದಲ್ಲಿ ಎಂದಿಗೂ ಕಡಿಮೆ ಅಂದಾಜು ಮಾಡಬಾರದು. ಪೂರ್ತಿ ಚಿಕಿತ್ಸೆ ಸಿಗದಿದ್ದರೆ ಅಪಾಯ ತಪ್ಪಿದ್ದಲ್ಲ'.

12:4420 Oct 2020

ಲಸಿಕೆ ಬಂದ ತಕ್ಷಣ ಪ್ರತಿ ಭಾರತೀಯನಿಗೂ ತಲುಪಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.

12:4320 Oct 2020

ಜನರನ್ನು ಉಳಿಸಲು ಸಮರೋಪಾದಿಯಲ್ಲಿ ಕೆಲಸಗಳು ಆಗುತ್ತಿವೆ. ನಮ್ಮ ದೇಶದ ವಿಜ್ಞಾನಿಗಳೂ ಲಸಿಕೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ, ಭಾರತದಲ್ಲಿಯೂ ಲಸಿಕೆ ವಿಚಾರದಲ್ಲಿ ಆಶಾವಾದ ಬಂದಿದೆ.

12:4220 Oct 2020

ಕೊರೊನಾ ವಿಚಾರದಲ್ಲಿಯೂ ಇದು ನಿಜ. ಮಹಾಮಾರಿಗೆ ಲಸಿಕೆ ಬರುವವರೆಗೆ ನಾವು ನಮ್ಮ ಹೋರಾಟ ನಿಲ್ಲಿಸಬಾರದು. ಎಚ್ಚರ ಕಡಿಮೆಯಾಗಬಾರದು.

12:4120 Oct 2020

ಕಬೀರರ ವಚನವೊಂದಿದೆ. 'ನಾವು ಫಸಲು ನೋಡಿ ಕೆಲಸ ಮುಗೀತು ಅಂತ ಖುಷಿ ಪಡ್ತೀವಿ. ಆದರೆ ಫಸಲು ಮನೆಗೆ ಬರುವವರೆಗೆ ಕೆಲಸ ನಿಲ್ಲಸಬಾರದು'.

12:4020 Oct 2020

ಅಮೆರಿಕ ಮತ್ತು ಯೂರೋಪ್‌ನ ದೇಶಗಳಲ್ಲಿ ಕೊರೊನಾ ಕಡಿಮೆಯಾಗುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಹಲವು ದೇಶಗಳಲ್ಲಿ ಏಕಾಏಕಿ ಸೋಂಕು ಹೆಚ್ಚಾಗುತ್ತಿದೆ. ಇದರಿಂದ ನಾವು ಎಚ್ಚೆತ್ತುಕೊಳ್ಳಬೇಕು.

12:3920 Oct 2020

ಮಾಸ್ಕ್‌ ಇಲ್ಲದೆ ಹೊರಗೆ ಬರುವವರು ತಮ್ಮ ಬಗ್ಗೆ, ತಮ್ಮ ಕುಟುಂಬದ ಬಗ್ಗೆ ಯೋಚಿಸಬೇಕು. ಇಂಥವರು ತಮ್ಮ ಕುಟುಂಬವನ್ನು ತಮ್ಮ ಕೈಯಾರೆ ಸಂಕಷ್ಟಕ್ಕೆ ದೂಡುತ್ತಿದ್ದಾರೆ.