ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

MSP ಇತ್ತು, ಎಂಎಸ್‌ಪಿ ಇದೆ, ಎಂಎಸ್‌ಪಿ ಇದ್ದೇ ಇರುತ್ತದೆ: ಮೋದಿ ಮತ್ತೆ ಸ್ಪಷ್ಟನೆ

Last Updated 8 ಫೆಬ್ರುವರಿ 2021, 10:49 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಕಾಯ್ದೆಗಳನ್ನು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಸಮರ್ಥನೆ ಮಾಡಿಕೊಂಡಿದ್ದಾರೆ. 15 ಗಂಟೆಗಳ ಪ್ರಶ್ನಾವಳಿ ಅವಧಿ ಚರ್ಚೆ ಮುಗಿದ ಬಳಿಕ ರಾಜ್ಯಸಭೆಯಲ್ಲಿ ಉತ್ತರಿಸಿದ ಅವರು, MSP ಇತ್ತು, ಎಂಎಸ್‌ಪಿ ಇದೆ, ಎಂಎಸ್‌ಪಿ ಇದ್ದೇ ಇರುತ್ತದೆ ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ.

ಎಂಎಸ್‌ಪಿ ಇದ್ದೇ ಇರುತ್ತದೆ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕುರಿತಂತೆ ಮತ್ತೆ ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ. ಎಂಎಸ್‌ಪಿ ಇತ್ತು, ಎಂಎಸ್‌ಪಿ ಇದೆ, ಎಂಎಸ್‌ಪಿ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ..

ರೈತರ ನಿರಂತರ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು "ನಾವುಮಾತುಕತೆಗೆ ಸಿದ್ಧರಿದ್ದೇವೆ ಮತ್ತು ನಾನು ನಿಮ್ಮನ್ನು ಈ ಸದನದ ಮೂಲಕ ಆಹ್ವಾನಿಸುತ್ತಿದ್ದೇನೆ. ಕನಿಷ್ಠ ಬೆಂಬಲ ಇತ್ತು. ಇದೆ, ಇದ್ದೇ ಇರುತ್ತದೆ . ಯಾರೂ ತಪ್ಪು ಮಾಹಿತಿಯನ್ನು ಹರಡಬಾರದು" ಎಂದು ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಉತ್ತರಿಸಿದ್ದಾರೆ.

"ನಾವು ಮುಂದೆೆ ಹೋಗಬೇಕು, ಹಿಂದಕ್ಕಲ್ಲ. ಈ ಸುಧಾರಣೆಗಳಿಗೆ ನಾವು ಒಂದು ಅವಕಾಶ ನೀಡಬೇಕು ," ಎಂದು ಹೇಳಿದ್ದಾರೆ.

ಕೃಷಿ ಚರ್ಚೆಗಳಲ್ಲಿ ಎಚ್ ಡಿ ದೇವೇಗೌಡಜೀ ಕೊಡುಗೆ ಶ್ಲಾಘನೀಯ

"ಇಂದು ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಇರುವ ಶೇ. 86ರಷ್ಟು ರೈತರಿದ್ದಾರೆ. ಅಂದರರ್ಥ 12 ಕೋಟಿ ರೈತರಿದ್ದಾರೆ. ಈ ರೈತರ ಬಗ್ಗೆ ದೇಶಕ್ಕೆ ಯಾವುದೇ ಜವಾಬ್ದಾರಿ ಇಲ್ಲವೆಎಂದು ಪ್ರಶ್ನಿಸಿದ್ದಾರೆ.

ಸಣ್ಣ ರೈತರ ಜೀವನವನ್ನು ಸುಧಾರಿಸುವುದು ಅಗತ್ಯ:ಎನ್‌ಡಿಎಯ ಇತರ ಯೋಜನೆಗಳು ಸಹ ರೈತರಿಗೆ ಸಹಾಯ ಮಾಡುತ್ತವೆ. ಉದಾಹರಣೆಗೆ- ಪಿಎಂಜಿಎಸ್‌ವೈ. ರಸ್ತೆ ಸಂಪರ್ಕವು ಸುಧಾರಿಸಿದಾಗ ರೈತರ ಉತ್ಪನ್ನಗಳನ್ನು ದೂರದ ಸ್ಥಳಗಳಿಗೆ ತಲುಪಿಸಲು ಸಾಧ್ಯವಾಗುತ್ತದೆ. ಕಿಸಾನ್ ರೈಲಿನಂತಹ ಪ್ರಯತ್ನಗಳೂ ಇವೆ. ಸಣ್ಣ ರೈತರ ಜೀವನವನ್ನು ಸುಧಾರಿಸುವುದು ಸಮಯದ ಅಗತ್ಯವಾಗಿದೆ ಎಂದು ಮೋದಿ ಹೇಳಿದ್ಧರೆ.
ರಾಷ್ಟ್ರಪತಿಅತ್ಯಂತ ಶಕ್ತಿಶಾಲಿ ಭಾಷಣವಾಗಿತ್ತು. ಕೆಲವರ ಅನುಪಸ್ಥಿತಿ ಬಳಿಕವೂ ಅದು ಪರಿಣಾಮ ಬೀರಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

ಭಾರತ ನಿಜಕ್ಕೂ ಅವಕಾಶಗಳ ನೆಲ. ಹಲವಾರು ಅವಕಾಶಗಳು ನಮ್ಮನ್ನು ಕಾಯುತ್ತಿವೆ, ಆದ್ದರಿಂದ ಯುವ, ಉತ್ಸಾಹದಿಂದ ತುಂಬಿರುವ ರಾಷ್ಟ್ರ ಮತ್ತು ಕನಸುಗಳನ್ನು ಸಾಕಾರಗೊಳಿಸುವ ಪ್ರಯತ್ನಗಳನ್ನು ಮಾಡುತ್ತಿರುವ ರಾಷ್ಟ್ರ, ಸಂಕಲ್ಪದೊಂದಿಗೆ, ಈ ಅವಕಾಶಗಳನ್ನು ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಜಗತ್ತಿನ ಕಣ್ಣುಗಳು ಭಾರತದ ಮೇಲಿವೆ. ಭಾರತ ದೇಶದ ಮೇಲೆ ನಿರೀಕ್ಷೆಗಳಿವೆ ಮತ್ತು ನಮ್ಮ ಭೂಮಂಡಲದ ಸುಧಾರಣೆಗೆ ಭಾರತ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವಿದೆ.

ಕೃಷಿಚರ್ಚೆಗಳಲ್ಲಿ ಎಚ್ ಡಿ ದೇವೇಗೌಡಜೀ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ:ಮೋದಿ

ದೇವೇಗೌಡರು ನಮ್ಮ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದಾರೆ. ಅವರಿಗೆ ಆಭಾರಿಯಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸದನದಲ್ಲಿ ಕೃಷಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ಎಚ್ ಡಿ ದೇವೇಗೌಡಜೀ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ. ಅವರ ಮಾತುಗಳು ಚರ್ಚೆಗೆ ಉತ್ತಮ ದೃಷ್ಟಿಕೋನವನ್ನು ನೀಡಿವೆ. ಅವರೇ ಕೃಷಿ ಕ್ಷೇತ್ರದೊಂದಿಗೆ ಬಲವಾದ ಒಡನಾಟವನ್ನು ಹೊಂದಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ನಮ್ಮ ಪ್ರಜಾಪ್ರಭುತ್ವ ಪಾಶ್ಚಿಮಾತ್ಯ ಸಂಸ್ಥೆಯಲ್ಲ. ಇದು ಮಾನವ ಸಂಸ್ಥೆ. ಭಾರತದ ಇತಿಹಾಸವು ಪ್ರಜಾಪ್ರಭುತ್ವ ಸಂಸ್ಥೆಗಳ ಉದಾಹರಣೆಗಳಿಂದ ತುಂಬಿದೆ. ಪ್ರಾಚೀನ ಭಾರತದಲ್ಲಿ 81 ಪ್ರಜಾಪ್ರಭುತ್ವಗಳ ಉಲ್ಲೇಖವನ್ನು ನಾವು ಕಾಣುತ್ತೇವೆ. ಭಾರತದ ರಾಷ್ಟ್ರೀಯತೆಯ ಮೇಲಿನ ದಾಳಿಯ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡುವುದು ಇಂದು ಅತ್ಯಗತ್ಯ: ಪ್ರಧಾನಿ ಮೋದಿ.

ಭಾರತ ಪ್ರಜಾಪ್ರಭುತ್ವದ ತಾಯಿ. ನಾವು ಈ ಪಾಠಗಳನ್ನು ಮುಂಬರುವ ಪೀಳಿಗೆಗೆ ಕಲಿಸಬೇಕಾಗಿದೆ. ಏಕೆಂದರೆ, ನಮ್ಮ ಪೂರ್ವಜರು ನಮಗೆ ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ರವಾನಿಸಿದ್ದಾರೆ. ನಾವು ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ರಕ್ಷಿಸಬೇಕಾಗಿದೆ.

ಕೃಷಿ ಚರ್ಚೆ ವೇಳೆಡೆರೆಕ್ ಜಿ ಅವರ ಮಾತುಗಳನ್ನು ಕೇಳುತ್ತಿದ್ದೆ, ಅವನು ಒಳ್ಳೆಯ ಪದಗಳನ್ನು ಆರಿಸಿದ್ದರು - ವಾಕ್ ಸ್ವಾತಂತ್ರ್ಯ,ಕ್ಕೆ ಧಕ್ಕೆ ಬಂದಿದೆ ಎಂದು ಹೇಳಿದರು. ಅವರು ಬಂಗಾಳದ ಬಗ್ಗೆ ಹೇಳಿದರೋ ಅಥವಾ ದೇಶದ ಬಗ್ಗೆ ಮಾತನಾಡುತ್ತಿದ್ದಾರೆಯೇ ಎಂದು ನನಗೆ ಆಶ್ಚರ್ಯವಾಯಿತು.

ಭಾರತದ ರಾಷ್ಟ್ರೀಯತೆ ಸಂಕುಚಿತ ಅಥವಾ ಸ್ವಾರ್ಥಪರತೆಯಿಂದ ಕೂಡಿದ್ದಲ್ಲ. ಇದು ಆಕ್ರಮಣಕಾರಿಯೂ ಕೂಡ ಅಲ್ಲ. ಇದು 'ಸತ್ಯಂ ಶಿವಂ ಸುಂದರಂ' ಮೌಲ್ಯಗಳಿಂದ ಪ್ರೇರಿತವಾಗಿದೆ. ಈ ಉಲ್ಲೇಖವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ನೀಡಿದ್ದಾರೆ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT