ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಶ ಪಾರಂಪರ್ಯ ರಾಜಕಾರಣ ಪ್ರಜಾಪ್ರಭುತ್ವ ವಿರೋಧಿ: ನರೇಂದ್ರ ಮೋದಿ

Last Updated 12 ಜನವರಿ 2021, 8:46 IST
ಅಕ್ಷರ ಗಾತ್ರ

ನವದೆಹಲಿ: ವಂಶ ಪಾರಂಪರ್ಯದ ಹೆಸರಿನಲ್ಲಿ ನಡೆಯುವ ರಾಜಕಾರಣ ಪ್ರಜಾಪ್ರಭುತ್ವದ ಶತ್ರು. ಇಂಥ ರಾಜಕಾರಣವನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.

ರಾಷ್ಟ್ರೀಯ ಯುವ ಸಂಸತ್‌ ಉತ್ಸವದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ‘ತಮ್ಮ ವಂಶದ ಅಡ್ಡಹೆಸರಿನ ಆಧಾರದ ಮೇಲೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದವರ ಸಂಖ್ಯೆ ಈಗ ಕ್ಷೀಣಿಸುತ್ತಿದೆ’ ಎಂದರು.

‘ಕುಟುಂಬವನ್ನು ರಕ್ಷಿಸುವ ಸಲುವಾಗಿಯೇ ಕೆಲವರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಾರೆ. ರಾಜಕೀಯವನ್ನು ಕಾಯಿಲೆಯಿಂತೆ ಕಾಡುತ್ತಿರುವ ವಂಶಪಾರಂಪರ್ಯ ರಾಜಕಾರಣವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ಅಗತ್ಯ’ ಎಂದು ಹೇಳುವ ಮೂಲಕ ಅವರು ಕಾಂಗ್ರೆಸ್‌ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ವಿರುದ್ಧ ಟೀಕಾಪ್ರಹಾರ ಮಾಡಿದರು.

‘ಯುವಜನತೆ ರಾಜಕೀಯ ಪ್ರವೇಶಿಸುವುದು ಅಗತ್ಯ. ಒಂದು ವೇಳೆ ಯುವಜನತೆ ರಾಜಕೀಯಕ್ಕೆ ಧುಮುಕದೇ ಇದ್ದಲ್ಲಿ ವಂಶಪಾರಂಪರ್ಯ ರಾಜಕಾರಣ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವುದನ್ನು ಮುಂದುವರಿಸುತ್ತದೆ’ ಎಂದು ಪ್ರತಿಪಾದಿಸಿದರು.

‘ಇತರ ಕ್ಷೇತ್ರಗಳಂತೆ, ರಾಜಕೀಯಕ್ಕೆ ಯುವಜನತೆ ಕಾಲಿಟ್ಟರೆ ಈ ಕ್ಷೇತ್ರಕ್ಕೂ ಹೊಸ ಯೋಚನೆ, ಶಕ್ತಿ ಹಾಗೂ ಉತ್ಸಾಹ ಬಂದಂತೆ ಆಗಲಿದೆ. ಈ ಹಿಂದೆ ಯುವ ಜನತೆ ರಾಜಕೀಯ ಪ್ರವೇಶಿಸಿದರೆ ಅವರು ದಾರಿತಪ್ಪುತ್ತಿದ್ದಾರೆ ಎಂದೇ ಅವರ ಕುಟುಂಬ ಭಾವಿಸುತ್ತಿತ್ತು. ಈಗ ಕಾಲ ಬದಲಾಗಿದ್ದು, ಪ್ರಾಮಾಣಿಕ ಜನರಿಗೆ ಅವಕಾಶ ನೀಡಬೇಕು ಎಂಬ ನಿಲುವು ಜನರದ್ದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT