ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರಾ: ವಿಮಾನ ನಿಲ್ದಾಣ ಟರ್ಮಿನಲ್ ಉದ್ಘಾಟನೆ, ಹಲವು ಯೋಜನೆಗಳಿಗೆ ಮೋದಿ ಚಾಲನೆ

Last Updated 4 ಜನವರಿ 2022, 11:39 IST
ಅಕ್ಷರ ಗಾತ್ರ

ಅಗರ್ತಲಾ: ಇಲ್ಲಿನ ಮಹಾರಾಜ ವೀರ ವಿಕ್ರಂ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್‌ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉದ್ಘಾಟಿಸಿದರು.

ಇದೇ ವೇಳೆ ಅವರು 'ಮುಖ್ಯಮಂತ್ರಿ ತ್ರಿಪುರಾ ಗ್ರಾಮ ಸಮೃದ್ಧಿ ಯೋಜನೆ' ಮತ್ತು 'ವಿದ್ಯಾಜ್ಯೋತಿ ಶಾಲೆಗಳ ಪ್ರಾಜೆಕ್ಟ್‌ ಮಿಷನ್‌-100' ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಪ್ರಧಾನಿ, ಹಿಂದಿನ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ವಿಪರೀತ ಭ್ರಷ್ಟಾಚಾರವಿತ್ತು ಮತ್ತು ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಲಿಲ್ಲ. ತ್ರಿಪುರವನ್ನು ಅಭಿವೃದ್ಧಿಪಡಿಸುವ ಯಾವುದೇ ಉದ್ದೇಶ ಆ ಸರ್ಕಾರಗಳಿಗೆ ಇರಲಿಲ್ಲ ಎಂದು ದೂರಿದ್ದಾರೆ. ಜೊತೆಗೆ,'ಬಡತನ ಮತ್ತು ಹಿಂದುಳಿದಿರುವಿಕೆಯು ತ್ರಿಪುರಾದ ವಿಧಿಬರಹದೊಂದಿಗೆ ಅಂಟಿಕೊಂಡಿತ್ತು' ಎಂದು ಉಲ್ಲೇಖಿಸಿದ್ದಾರೆ.

21ನೇ ಶತಮಾನದ ಭಾರತವು ಎಲ್ಲರನ್ನೂ ಒಳಗೊಂಡಂತೆ ಮುನ್ನಡೆಯುತ್ತಿದೆ. ಪ್ರಸ್ತುತ ಸರ್ಕಾರ ಅಭಿವೃದ್ಧಿಯ ಅಸಮಾನತೆಯನ್ನು ಬೆಂಬಲಿಸುವುದಿಲ್ಲ. ತ್ರಿಪುರಾ ಜನರು ಇದನ್ನು ದಶಕದಿಂದ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

ತ್ರಿಪುರಾ ತನ್ನ ಸಂಪರ್ಕ ಜಾಲವನ್ನು ಇದೀಗ HIRA (H–ಹೆದ್ದಾರಿ, I–ಅಂತರ್ಜಾಲ, R–ರೈಲ್ವೆ A–ವಿಮಾನ. ಮಾದರಿಯಲ್ಲಿ ಅಭಿವೃದ್ಧಿ ಪಡಿಸಿಕೊಂಡಿದೆ. ಡಬಲ್‌ ಎಂಜಿನ್‌ (ಕೇಂದ್ರ ಮತ್ತು ರಾಜ್ಯ) ಸರ್ಕಾರತಾರತಮ್ಯ ಮಾಡುವುದಿಲ್ಲ. ನಿರ್ಣಯಗಳನ್ನು ಸಾಕಾರಗೊಳಿಸುವುದರಲ್ಲಿ ನಂಬಿಕೆ ಇಟ್ಟಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT