ಪ್ರಧಾನ್ಮಂತ್ರಿ ಸಂಗ್ರಹಾಲಯ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಸ್ವಾತಂತ್ರ್ಯಾನಂತರದ ಎಲ್ಲ ಪ್ರಧಾನ ಮಂತ್ರಿಗಳಿಗೆ ಗೌರವ ಸಲ್ಲಿಸುವ ಮತ್ತು ಅವರ ಸ್ಮರಣಾರ್ಥ ಅಪರೂಪದ ವಸ್ತುಗಳ ಮ್ಯೂಸಿಯಂ ‘ಪ್ರಧಾನ್ಮಂತ್ರಿ ಸಂಗ್ರಹಾಲಯ‘ವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ದೆಹಲಿಯಲ್ಲಿ ಲೋಕಾರ್ಪಣೆ ಮಾಡಿದರು.
ಸ್ವಾತಂತ್ರ್ಯ ದೊರೆತ ಬಳಿಕ ದೇಶದ ಬೆಳವಣಿಗೆಗೆ ವಿವಿಧ ರೀತಿಯ ಕೊಡುಗೆ ನೀಡಿರುವ ಪ್ರಧಾನಿಗಳ ಕುರಿತು ಈ ಸಂಗ್ರಹಾಲಯದಲ್ಲಿ ಮಹತ್ವದ ಮಾಹಿತಿ ದೊರೆಯಲಿದೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ಹೇಳಿದೆ.
ಉದ್ಘಾಟನೆಗೂ ಮುನ್ನ ಮೊದಲ ಟಿಕೆಟ್ ಖರೀದಿಸಿದ ಪ್ರಧಾನಿ ನರೇಂದ್ರ ಮೋದಿ, ಸಂಗ್ರಹಾಲಯ ವೀಕ್ಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾನು ಈಗ ಅಧಿಕಾರದಲ್ಲಿಲ್ಲ, ತುಂಬಾ ಅಪಾಯಕಾರಿಯಾಗಬಲ್ಲೆ: ಇಮ್ರಾನ್ ಖಾನ್
Delhi | Prime Minister Narendra Modi arrives at Teen Murti House to inaugurate 'Pradhanmantri Sangrahalaya'- a museum dedicated to country's Prime Ministers since Independence pic.twitter.com/QNZv7gAmYm
— ANI (@ANI) April 14, 2022
ಯುವಜನಾಂಗಕ್ಕೆ ದೇಶವನ್ನಾಳಿದ ಎಲ್ಲ ಪ್ರಧಾನಿಗಳ ನಾಯಕತ್ವ, ಕಾರ್ಯಯೋಜನೆ ಮತ್ತು ದೂರದೃಷ್ಟಿಯ ಪರಿಚಯವನ್ನು ನೂತನ ಸಂಗ್ರಹಾಲಯ ಮಾಡಿಕೊಡಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.