ಆ್ಯಂಟ್ವರ್ಪ್: ಯುರೋಪ್ ಪ್ರವಾಸದಲ್ಲಿರುವ ಭಾರತ ‘ಎ’ ಪುರುಷರ ಹಾಕಿ ತಂಡವು ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ಬೆಲ್ಜಿಯಂ ಎದುರು 1–3 ಗೋಲುಗಳಿಂದ ಪರಾಭವಗೊಂಡಿತು.

ನಾಯಕ ಸಂಜಯ್ ಅವರು ಭಾರತದ ಪರ ಏಕೈಕ ಗೋಲು ದಾಖಲಿಸಿದರು.

ಬೆಲ್ಜಿಯಂ ತಂಡವು ಪಂದ್ಯದ ಮೊದಲ ಕ್ವಾರ್ಟರ್ನಲ್ಲೇ ಮೂರು ಗೋಲುಗಳನ್ನು ಗಳಿಸಿ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಭಾರತದ ಆಟಗಾರರು ನಂತರದ ಅವಧಿಯಲ್ಲಿ ಪ್ರತಿರೋಧ ತೋರಿದರೂ, ಗೆಲುವು ದಕ್ಕಲಿಲ್ಲ.

‘ವಿಶ್ವದಲ್ಲಿ ಬಲಿಷ್ಠ ಎನಿಸಿರುವ ತಂಡಗಳ ವಿರುದ್ಧ ಪಂದ್ಯಗಳನ್ನು ಆಡುತ್ತಿರುವ ಭಾರತ ಎ ತಂಡದ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಇದೆ. ಆದಾಗ್ಯೂ ಅವರು ಆತ್ಮವಿಶ್ವಾಸದಿಂದ ಆಡುತ್ತಿದ್ದು, ಮೈದಾನದಲ್ಲಿ ಸಕಾರಾತ್ಮಕ ಪ್ರದರ್ಶನ ನೀಡುತ್ತಿದ್ದಾರೆ’ ಎಂದು ಕೋಚ್ ಶಿವೇಂದ್ರ ಸಿಂಗ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.