ದಿನ ಭವಿಷ್ಯ | ಅನಗತ್ಯ ವಿಚಾರಗಳ ಬಗ್ಗೆ ಚಿಂತಿಸುವುದನ್ನು ಬಿಡಿ
Published 17 ಜುಲೈ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪಾರಮಾರ್ಥಿಕ ವಿಷಯಗಳತ್ತ ಮನಸ್ಸು ಹರಿಯುವುದು. ಸರ್ಕಾರಿ ಕಚೇರಿಗಳಲ್ಲಿನ ಕೆಲಸಕ್ಕೆ ಹೆಚ್ಚು ಓಡಾಡುವ ಸಂದರ್ಭ ಎದುರಾಗಲಿದೆ. ಮಗನ ಉದ್ಯೋಗ ನಿಮಿತ್ತ ಅಧಿಕಾರಿಯೊಬ್ಬರ ನೆರವು ಪಡೆಯುವಿರಿ.
ವೃಷಭ
ರಾಜಕೀಯ ಚಟುವಟಿಕೆಗಳಲ್ಲಿ ಬಿರುಸಿನ ಓಡಾಟ ಇರುವುದು. ಖರ್ಚು–ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಲು ಪ್ರಯತ್ನಿಸುವಿರಿ. ಕಠಿಣ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕವಾಗಿ ಅನುಕೂಲ ಉಂಟಾಗುವುದು.
ಮಿಥುನ
ನ್ಯಾಯಾಂಗ ಇಲಾಖೆಯವರಿಗೆ ಬಡ್ತಿ ಅಥವಾ ವರ್ಗಾವಣೆ ಸಾಧ್ಯತೆ. ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು ಅಪೇಕ್ಷಿಸಬಹುದು. ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿ ಏಳಿಗೆಯನ್ನು ಹೊಂದುವಿರಿ.
ಕರ್ಕಾಟಕ
ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ತಾಂತ್ರಿಕ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಪರಿಶ್ರಮ ಮತ್ತು ದೇವರ ಕೃಪಾ ಕಟಾಕ್ಷ ಪಡಬೇಕಾಗುವುದು. ಸರ್ಕಾರದಿಂದ ಸಹಾಯ ಸೌಲಭ್ಯ ದೊರೆಯಲಿದೆ.
ಸಿಂಹ
ಸ್ವಯಂ ಸಾಮರ್ಥ್ಯದಿಂದ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಜೀವನದ ಹಾದಿ ಬದಲಾಗುವುದು ಅನುಭವಕ್ಕೆ ಬರಲಿದೆ. ಸಮಸ್ಯೆ ಇತ್ಯರ್ಥಗೊಂಡು ಪ್ರತಿವಾದಿಗಳು ನಿರುತ್ತರರಾಗುವರು.
ಕನ್ಯಾ
ಸಣ್ಣ ವಿಷಯಗಳಿಗೆ ಕೋಪಿಸಿಕೊಳ್ಳುವ ಮನಸ್ಥಿತಿಯಿಂದಾಗಿ ಹಿರಿಯರ ಕೋಪಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಅರ್ಥಶಾಸ್ತ್ರಜ್ಞರಿಗೆ ಹಿಂದಿನ ಸಾಧನೆಗಳನ್ನು ಗುರುತಿಸಿ ಗೌರವದ ಕರೆ ಬರಲಿದೆ.
ತುಲಾ
ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಇತರರಿಗೆ ಅಸೂಯೆ ಉಂಟಾಗದಂತೆ ಕಾರ್ಯ ಸಾಧಿಸಿ ಕೊಳ್ಳುವುದು ಉತ್ತಮ. ಮನೆಯ ಹೊರಗಿನ ಆಹಾರ ಸೇವನೆ ಬೇಡ.
ವೃಶ್ಚಿಕ
ಮೇಲಧಿಕಾರಿಗಳಿಗೆ ಸಲ್ಲಿಸಿದ ಅರ್ಜಿಯು ಮುಂದುವರಿಯದೆ ಇರುವುದು ಮನಸ್ಸಿಗೆ ಗಾಸಿಗೊಳಿಸಬಹುದು. ಬೆಂಕಿಯಿಂದ ಸಂಭವವಾಗುವಂಥ ತೊಂದರೆಗಳ ಬಗ್ಗೆ ಮುನ್ನೆಚ್ಚರಿಕೆಯನ್ನು ವಹಿಸಿ.
ಧನು
ಆಯ್ಕೆ, ತೀರ್ಮಾನ ಮಾಡುವ ವಿಚಾರಗಳಲ್ಲಿಮನಸ್ಸಿನ ಚಂಚಲ ಸ್ವಭಾವದಿಂದ ವಿಫಲರಾಗುವ ಸನ್ನಿವೇಶಗಳಿರುವುದು. ನಿಮ್ಮ ಒಳ್ಳೆಯ ಮಾತುಗಳು ಸ್ಫೂರ್ತಿದಾಯಕವಾಗಿರುತ್ತವೆ.
ಮಕರ
ಕಾರ್ಮಿಕರಿಗೆ ಆಡಳಿತ ವರ್ಗದವರಿಂದ ಅನುಕೂಲಗಳು ಉಂಟಾಗಲಿವೆ. ಭಾವನೆಗಳ ಮೇಲೆ ಹಿಡಿತವನ್ನು ಸಾಧಿಸುವ ಪ್ರಯತ್ನವನ್ನು ಮಾಡಿ. ಸಾಧನೆಗೆ ಅಪರಿಚಿತರೂ ಪ್ರಶಂಸಿಸುವಂತೆ ಆಗುವುದು.
ಕುಂಭ
ಸಂಘಟನಾ ಶಕ್ತಿಯನ್ನು ಹೊಂದಿರುವ ನಿಮಗೆ ಪಾಲುದಾರರಲ್ಲಿ ವ್ಯವಹರಿಸುವುದು ಸುಲಭ. ವಿದ್ಯಾಭ್ಯಾಸದಲ್ಲಿ ಆಲಸ್ಯ ತೋರಿ ಬರುವುದು. ಉದ್ಯೋಗ ನಿರೀಕ್ಷೆಯಲ್ಲಿರುವವರು ಉತ್ತಮ ಸಮಾಚಾರವನ್ನು ಕೇಳುವಿರಿ.
ಮೀನ
ತಲೆಬೇನೆ, ಮಾನಸಿಕ ಅಸ್ವಸ್ಥತೆಯಂಥ ತೊಂದರೆಗಳು ಕಾಡುವ ಸಂಭವವಿದೆ. ಅನಗತ್ಯ ವಿಚಾರಗಳ ಬಗ್ಗೆ ಚಿಂತಿಸುವುದನ್ನು ಬಿಡಿ. ಹಣಕಾಸಿಗೆ ಸಂಬಂಧಿಸಿದಂತೆ ಹೊಸದಾದ ತೀರ್ಮಾನವನ್ನು ಕೈಗೊಳ್ಳುವುದು ಸರಿಯಲ್ಲ.