ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆ ಆರಂಭ

Last Updated 7 ಆಗಸ್ಟ್ 2022, 9:09 IST
ಅಕ್ಷರ ಗಾತ್ರ

ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗದಏಳನೇ ಆಡಳಿತ ಮಂಡಳಿ ಸಭೆಯು ಆರಂಭವಾಗಿದೆ.ಬೆಳೆವೈವಿಧ್ಯೀಕರಣ, ನಗರಾಭಿವೃದ್ಧಿ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಜಾರಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯುತ್ತಿದೆ.

2019ರ ಜುಲೈ ಬಳಿಕಭೌತಿಕವಾಗಿ ನಡೆಯುತ್ತಿರುವ ಮೊದಲ ಬಾರಿಗೆ ಇದಾಗಿದೆ.

ನೀತಿ ಆಯೋಗದ ಆಡಳಿತ ಮಂಡಳಿಯು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನಂಟ್‌ ಗವರ್ನರ್‌ಗಳು, ಕೇಂದ್ರದ ಹಲವು ಸಚಿವರು ಒಳಗೊಂಡಿದೆ. ಪ್ರಧಾನಿ ಅವರು ನೀತಿ ಆಯೋಗದ ಮುಖ್ಯಸ್ಥರಾಗಿರುತ್ತಾರೆ.

ಸಾಮಾನ್ಯವಾಗಿ ಆಡಳಿತ ಮಂಡಳಿ ಸಭೆ ಪ್ರತಿವರ್ಷವೂ ನಡೆಯುತ್ತದೆ. ಆದರೆ, ಕೊರೊನಾವೈರಸ್‌ ಸಾಂಕ್ರಾಮಿಕದಿಂದಾಗಿ 2020ರಲ್ಲಿ ಸಭೆ ನಡೆದಿರಲಿಲ್ಲ. ಮಂಡಳಿಯ ಮೊದಲ ಸಭೆ 2015ರ ಫೆಬ್ರುವರಿ ಫೆಬ್ರವರಿ 8ರಂದು ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT