ಚೆನ್ನೈ: ತಮಿಳುನಾಡಿನ ಬಿಜೆಪಿ ಘಟಕವು ಮದುರೈನಲ್ಲಿ ಜನವರಿ 12 ರಂದು ಹಮ್ಮಿಕೊಂಡಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಯ ಸುಗ್ಗಿ ಹಬ್ಬ ಪೊಂಗಲ್ ಅನ್ನು ಆಚರಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ‘ಮೋದಿ ಪೊಂಗಲ್’ ಎಂದೇ ಹೆಸರಿಡಲಾಗಿದೆ. ಈ ಕಾರ್ಯಕ್ರಮದಲ್ಲಿ ಇತರ ಚಟುವಟಿಕೆಗಳ ಜೊತೆಗೆ ಹಬ್ಬದಲ್ಲಿ ಪ್ರಮುಖವಾಗಿ ತಮಿಳು ಸಂಸ್ಕೃತಿಯ ಭಾಗವಾದ ಪೊಂಗಲ್ ಖಾದ್ಯವನ್ನು ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ತಮಿಳುನಾಡಿನ ವಿವಿಧೆಡೆ ನಿರ್ಮಿಸಿರುವ 11 ವೈದ್ಯಕೀಯ ಕಾಲೇಜುಗಳನ್ನು ಮೋದಿ ಅವರು ಉದ್ಘಾಟಿಸಲಿದ್ದಾರೆ.ಕಳೆದ ಏಪ್ರಿಲ್ 6ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಯೊಂದಿಗೆ ಡಿಎಂಕೆ ಪಕ್ಷ ಜಯಗಳಿಸಿದ ನಂತರ ತಮಿಳುನಾಡಿಗೆ ಪ್ರಧಾನಿ ಅವರ ಮೊದಲ ಭೇಟಿ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.