ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಜೀವನ ಮಿಷನ್‌: ಶನಿವಾರ ಗ್ರಾ.ಪಂ.ಗಳೊಂದಿಗೆ ಪ್ರಧಾನಿ ವಿಡಿಯೊ ಸಂವಾದ

Last Updated 1 ಅಕ್ಟೋಬರ್ 2021, 15:35 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಲ ಜೀವನ ಮಿಷನ್‌ ಕುರಿತು ಗ್ರಾಮ ಪಂಚಾಯಿತಿಗಳು ಹಾಗೂ ಗ್ರಾಮ ಜಲ ಮತ್ತು ನೈರ್ಮಲ್ಯ ಸಮಿತಿಗಳೊಂದಿಗೆ (ವಿಡಬ್ಲ್ಯೂಎಸ್‌ಸಿ) ಶನಿವಾರ (ಅ.2)ಬೆಳಿಗ್ಗೆ 11ಕ್ಕೆ ವಿಡಿಯೊ ಸಂವಾದ ನಡೆಸಲಿದ್ದಾರೆ.

ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಕಾಪಾಡುವ ಸಂಬಂಧ ಭಾಗಿದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ಜಲ ಜೀವನ ಮಿಷನ್‌ ಮೊಬೈಲ್‌ ಆ್ಯಪ್‌’ ಗೆ ಇದೇ ಸಂದರ್ಭದಲ್ಲಿ ಅವರು ಚಾಲನೆ ನೀಡುವರು ಎಂದು ಪ್ರಧಾನಮಂತ್ರಿ ಕಚೇರಿ (ಪಿಎಂಒ) ಶುಕ್ರವಾರ ಹೇಳಿದೆ.

‘ರಾಷ್ಟ್ರೀಯ ಜಲ ಜೀವಜೀವನ ಕೋಶ’ ಎಂಬ ಕಾರ್ಯಕ್ರಮಕ್ಕೂ ಪ್ರಧಾನಿ ಚಾಲನೆ ನೀಡುವರು. ಗ್ರಾಮೀಣ ಪ್ರದೇಶಗಳ ಮನೆಗಳು, ಶಾಲೆ, ಅಂಗನವಾಡಿ ಕೇಂದ್ರಗಳು, ವಸತಿ ಶಾಲೆಗಳು ಸೇರಿದಂತೆ ಸಾರ್ವಜನಿಕ ಸಂಸ್ಥೆಗಳಿಗೆ ನಲ್ಲಿ ನೀರು ಸಂಪರ್ಕ ಒದಗಿಸುವುದಕ್ಕಾಗಿ ಈ ಕೋಶ ದೇಣಿಗೆ ಸಂಗ್ರಹಿಸುತ್ತದೆ.

ಈ ಕಾರ್ಯಕ್ರಮಕ್ಕೆ ನೆರವು ನೀಡಲು ಇಚ್ಛಿಸುವ ಭಾರತ ಅಥವಾ ವಿದೇಶದಲ್ಲಿರುವ ವ್ಯಕ್ತಿಗಳು, ಸಂಸ್ಥೆಗಳು, ಕಾರ್ಪೊರೇಟ್‌ ಅಥವಾ ಸಮಾಜಸೇವಾ ಸಂಸ್ಥೆಗಳು ಈ ಕೋಶಕ್ಕೆ ದೇಣಿಗೆ ನೀಡಬಹುದು ಎಂದು ಪಿಎಂಒ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT