ಬುಧವಾರ, ಜನವರಿ 20, 2021
29 °C

ಪ್ರಧಾನಿ ಮೋದಿ ಅವರಿಂದ ಇಂದು 'ಕೋವಿಡ್‌ ಲಸಿಕೆ ಪ್ರವಾಸ': ಮೂರು ನಗರಗಳಿಗೆ ಭೇಟಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಹಮದಾಬಾದ್, ಹೈದರಾಬಾದ್ ಮತ್ತು ಪುಣೆಗೆ ಭೇಟಿ ನೀಡಲಿದ್ದಾರೆ ಎಂದು ಪ್ರಧಾನಿ ಕಚೇರಿ (ಪಿಎಂಒ) ತಿಳಿಸಿದೆ.

'ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ಸ್ವತಃ ಪರಿಶೀಲಿಸಲು ಶನಿವಾರ ಪ್ರಧಾನಿ ನರೇಂದ್ರ ಮೋದಿ 3 ನಗರಗಳಿಗೆ ಭೇಟಿ ನೀಡಲಿದ್ದಾರೆ. ಅಹಮದಾಬಾದ್‌ನ 'ಸೈಡಸ್ ಬಯೋಟೆಕ್ ಪಾರ್ಕ್', ಹೈದರಾಬಾದ್‌ನ 'ಭಾರತ್ ಬಯೋಟೆಕ್' ಮತ್ತು ಪುಣೆಯ 'ಸೀರಮ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ'ಕ್ಕೆ ಅವರು ಭೇಟಿ ನೀಡುವರು' ಎಂದು ಪಿಎಂಒ ಟ್ವೀಟ್ ಮಾಡಿದೆ.

'ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಭಾರತ ನಿರ್ಣಾಯಕ ಹಂತಕ್ಕೆ ಪ್ರವೇಶಿಸಿದೆ. ಈ ಸಮಯದಲ್ಲಿ ನರೇಂದ್ರ ಮೋದಿ ಅವರ ಭೇಟಿ ಮತ್ತು ವಿಜ್ಞಾನಿಗಳೊಂದಿಗಿನ ಚರ್ಚೆಗಳು ಲಸಿಕೆ ಅಭಿವೃದ್ದಿ ಮತ್ತು ಸಿದ್ಧತೆಗಳ ಕುರಿತ ಒಟ್ಟು ಮಾಹಿತಿ ಸಂಗ್ರಹಣೆಗೆ ನೆರವಾಗಲಿದೆ. ಮತ್ತು, ದೇಶದ ನಾಗರಿಕರಿಗೆ ಲಸಿಕೆ ಪೂರೈಸಲು ಇರುವ ಸವಾಲುಗಳು ಮತ್ತು ಮಾರ್ಗಸೂಚಿಗಳನ್ನು ಅರಿಯಲು ಸಹಕಾರಿಯಲಿದೆ,' ಎಂದೂ ಟ್ವೀಟ್‌ನಲ್ಲಿ ಹೇಳಲಾಗಿದೆ.

ಪ್ರಧಾನಿ ಮೋದಿ ಮೊದಲಿಗೆ ಅಹಮದಾಬಾದ್‌ನ ಸೈಡಸ್‌ ಬಯೋಟೆಕ್‌ ಪಾರ್ಕ್‌ಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 9.30ಕ್ಕೆ ಈ ಭೇಟಿ ನಿಗದಿಯಾಗಿದೆ. ನಂತರ ಹೈದರಾಬಾದ್‌ ಮತ್ತು ಪುಣೆಗೆ ತೆರಳಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು