ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ವರ್ಜೀನಿಯಾ: ಪೊಲೀಸರಿಂದ ಗುಂಡೇಟು– ಕಪ್ಪುವರ್ಣೀಯಗೆ ಗಾಯ

Last Updated 1 ಮೇ 2021, 7:48 IST
ಅಕ್ಷರ ಗಾತ್ರ

ಚಾರ್ಲೆಸ್ಟನ್‌ (ಅಮೆರಿಕ): ಪಶ್ಚಿಮ ವರ್ಜೀನಿಯಾ ರಾಜಧಾನಿ ಚಾರ್ಲೆಸ್ಟನ್‌ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಚಾಕು ಹಿಡಿದುಕೊಂಡಿದ್ದ ಕಪ್ಪು ವರ್ಣದ ವ್ಯಕ್ತಿಯೊಬ್ಬನತ್ತ ಐದು ಬಾರಿ ಗುಂಡು ಹೊಡೆದು ಗಾಯಗೊಳಿಸಿರುವ ಘಟನೆ ನಡೆದಿದೆ. ಈ ದೃಶ್ಯಗಳು ಪೊಲೀಸರು ಧರಿಸಿರುವ ‘ಬಾಡಿ ಕ್ಯಾಮೆರಾ’ದಲ್ಲಿ ಸೆರೆಯಾಗಿವೆ ಎಂದು ಪೊಲೀಸ್ ಮುಖ್ಯಸ್ಥ ಜೇಮ್ಸ್‌ ಟೈಕ್‌ ಹಂಟ್‌ ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಮತ್ತು ಕಪ್ಪುವರ್ಣೀಯನ ನಡುವೆ ನಡೆದಿರುವ ಸಂಘರ್ಷದ ದೃಶ್ಯಗಳನ್ನು ಜೇಮ್ಸ್‌ ಟೈಕ್‌ ಹಂಟ್‌ ಅವರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಈ ಘಟನೆಯಲ್ಲಿ ಡಿನೌಲ್ ಡಿಕರ್‌ಸನ್‌ (33) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದರು.

ಈ ಘಟನೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಹಂಟ್‌ ಮಾಹಿತಿ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT