ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳವು ಮುಖ್ಯಮಂತ್ರಿ ಮಮತಾಗೆ ವಿಶ್ರಾಂತಿ ನೀಡಲು ಬಯಸಿದೆ: ಜೆ.ಪಿ. ನಡ್ಡಾ

Last Updated 8 ಏಪ್ರಿಲ್ 2021, 15:15 IST
ಅಕ್ಷರ ಗಾತ್ರ

ಕೂಚ್‌ಬೆಹರ್‌: ಜನರ ಸೇವೆ ಮಾಡುವ ಅವಕಾಶವನ್ನು ತಮ್ಮ ಪಕ್ಷಕ್ಕೆಕಲ್ಪಿಸಿಕೊಡುವ ಮೂಲಕಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ವಿಶ್ರಾಂತಿ ನೀಡಲುಪಶ್ಚಿಮ ಬಂಗಾಳವು ನಿರ್ಧರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿದಿನ್ಹಾಟ ಪ್ರದೇಶದಲ್ಲಿ ನಡೆದ ರೋಡ್‌ಶೋದಲ್ಲಿ ಭಾಗವಹಿಸಿದ ನಡ್ಡಾ, ʼಈ ಸಮಾರಂಭವು, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜನರು ಉತ್ಸುಕರಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಜನರುʼಮಮತಾಜೀಗೆ ವಿಶ್ರಾಂತಿ ನೀಡಿ, ಬಿಜೆಪಿಗೆ ಕೆಲಸ ಕೊಡೋಣʼ ಎನ್ನುತ್ತಿದ್ದಾರೆʼಎಂದಿದ್ದಾರೆ.

ಟಿಎಂಸಿ ನೇತೃತ್ವದ ಸರ್ಕಾರದ ವಿರುದ್ಧವೂ ಕಿಡಿ ಕಾರಿರುವ ಬಿಜೆಪಿ ಅಧ್ಯಕ್ಷ, ʼಬಂಗಾಳದ ಜನರು ಭ್ರಷ್ಟಾಚಾರವನ್ನು ವಿರೋಧಿಸುತ್ತಿದ್ದಾರೆ. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಉತ್ತಮಗೊಳಿಸಲು ಬಯಸುವುದಾದರೆ, ಅವರು ಬಿಜೆಪಿಗೆ ಮತ ನೀಡಬೇಕುʼ ಎಂದು ಕರೆ ನೀಡಿದ್ದಾರೆ.

ʼಅಂಫಾನ್‌ ಚಂಡಮಾರುತದ ಬಳಿಕ ಕೇಂದ್ರ ಸರ್ಕಾರ ಕಳುಹಿಸಿದ ಪರಿಹಾರ ಸಾಮಾಗ್ರಿಗಳು ಟಿಎಂಸಿ ನಾಯಕರ ನಿವಾಸಗಳಲ್ಲಿ ಪತ್ತೆಯಾಗಿವೆ. ಈ ಕಾರಣಕ್ಕೆ ಜನರು ಟಿಎಂಸಿಯನ್ನು ಶಿಕ್ಷಿಸಬೇಕುʼ ಎಂದು ಹೇಳಿದ್ದಾರೆ.

ಬಂಗಾಳ ವಿಧಾನಸಭೆಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಸದ್ಯ ಮೂರು ಹಂತಗಳು ಮುಗಿದಿದ್ದು, ನಾಲ್ಕನೇ ಹಂತ ಏಪ್ರಿಲ್‌ 10 ರಂದು ನಡೆಯಲಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT