ಸೋಮವಾರ, ಜೂನ್ 21, 2021
30 °C
ಕೋವಿಡ್‌ ಪಿಡುಗಿನ ಅವಧಿಯಲ್ಲಿ ಚುನಾವಣೆ, ಚುನಾವಣಾ ಆಯೋಗದಿಂದ ಮಾರ್ಗಸೂಚಿ

ಮತದಾರರಿಗೆ ಕೈಗವಸು, ಮತದಾನ ಕೇಂದ್ರದಲ್ಲಿ ಥರ್ಮಲ್‌ ಸ್ಕ್ಯಾನರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್–19 ಪಿಡುಗಿನ ಅವಧಿಯಲ್ಲಿ ನಡೆಯುವ ಚುನಾವಣೆಯ ಮಾರ್ಗಸೂಚಿಗಳನ್ನು ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. ಪಿಡುಗಿನ ನಡುವೆ ಚುನಾವಣೆ ಎದುರಿಸುತ್ತಿರುವ ರಾಜ್ಯಗಳ ಪೈಕಿ ಬಿಹಾರ ಮೊದಲಿದ್ದು, ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಮಾರ್ಗಸೂಚಿಯ ವಿವರ ಹೀಗಿದೆ... 

*ಇವಿಎಂನಲ್ಲಿ ಬಟನ್‌ ಒತ್ತಲು ಪ್ರತಿ ಮತದಾರರಿಗೆ ಕೈಗವಸು ನೀಡಲಾಗುವುದು 

*ಮತದಾನ ಕೇಂದ್ರಗಳಲ್ಲಿ ಚುನಾವಣಾ ಸಿಬ್ಬಂದಿ ಅಥವಾ ವೈದ್ಯಕೀಯ ಸಿಬ್ಬಂದಿಯೇ ಮತದಾರರು ಕೊಠಡಿ ಒಳಪ್ರವೇಶಿಸುವ ಮುನ್ನ ಥರ್ಮಲ್‌ ಸ್ಕ್ಯಾನರ್‌ ಮುಖಾಂತರ ಮತದಾರರ ದೇಹದ ಉಷ್ಣಾಂಶ ಪರಿಶೀಲಿಸಲಿದ್ದಾರೆ

*ಕ್ವಾರಂಟೈನ್‌ನಲ್ಲಿ ಇರುವ ಕೋವಿಡ್‌–19 ರೋಗಿಗಳಿಗೆ ಮತದಾನದ ದಿನ ಕೊನೆಯ ಒಂದು ಗಂಟೆಯಲ್ಲಿ ಮತದಾನಕ್ಕೆ ಅವಕಾಶ 

*ಮತದಾನ ಕೇಂದ್ರಗಳನ್ನು ಮತದಾನದ ಮುನ್ನಾ ದಿನ ಕಡ್ಡಾಯವಾಗಿ ಸೋಂಕುನಿವಾರಕಗಳನ್ನು ಬಳಸಿ ಸ್ವಚ್ಛಗೊಳಿಸಬೇಕು 

*ಒಂದು ಮತಗಟ್ಟೆಯಲ್ಲಿ 1,500 ಮತದಾರರ ಬದಲಾಗಿ ಗರಿಷ್ಠ 1,000 ಮತದಾರರಿಗೆ ಅವಕಾಶ 

*ಮನೆ ಮನೆ ಪ್ರಚಾರಕ್ಕೆ ಭದ್ರತಾ ಸಿಬ್ಬಂದಿ ಹೊರತುಪಡಿಸಿ ಅಭ್ಯರ್ಥಿ ಸೇರಿದಂತೆ ಗರಿಷ್ಠ 5 ಜನರಿಗಷ್ಟೇ ಅವಕಾಶ 

*ರೋಡ್‌ಶೋ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ವಾಹನ ಹೊರತುಪಡಿಸಿ ಒಟ್ಟಾಗಿ ಕೇವಲ ಐದು ವಾಹನಗಳು ಸಂಚರಿಸಲಷ್ಟೇ ಅವಕಾಶ.  

*ಕೋವಿಡ್‌–19 ಮಾರ್ಗಸೂಚಿಗಳನ್ನು(ಪರಸ್ಪರ ಆರು ಅಡಿ ಅಂತರ, ಮುಖಗವಸು ಕಡ್ಡಾಯ ಮುಂತಾದವುಗಳು) ಅನುಸರಿಸಿ ಸಾರ್ವಜನಿಕ ಸಭೆ, ರ್‍ಯಾಲಿ ಆಯೋಜಿಸಬಹುದು

* ಸಾರ್ವಜನಿಕ ಸಭೆಗಳಿಗೆ ಮೈದಾನಗಳನ್ನು ಜಿಲ್ಲಾ ಚುನಾವಣಾಧಿಕಾರಿ ಮೊದಲೇ ಗುರುತಿಸಬೇಕು. ಇವುಗಳಿಗೆ ಸೂಕ್ತವಾದ ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆ ಇರಬೇಕು 

*ನಿಗದಿಪಡಿಸಿದ ಮೈದಾನಗಳಲ್ಲಿ ಆಯೋಜಿಸುವ ಸಭೆಯಲ್ಲಿ ಭಾಗವಹಿಸುವ ಜನರು ಪರಸ್ಪರ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವಂತೆ ಮೊದಲೇ ಗುರುತು ಹಾಕುವ ಹೊಣೆ ಜಿಲ್ಲಾ ಚುನಾವಣಾಧಿಕಾರಿಗೆ 

*ಸಾರ್ವಜನಿಕ ಸಭೆಗಳಿಗೆ ಆಯಾ ರಾಜ್ಯಗಳ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸೂಚಿಸಿದ ಸಂಖ್ಯೆಗಿಂತ ಅಧಿಕ ಸಂಖ್ಯೆಯ ಜನರು ಭಾಗವಹಿಸದಂತೆ ನಿರ್ವಹಿಸುವ ಹೊಣೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಎಸ್‌ಪಿಗೆ 

 

 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು