ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ದಾಳಿಗೆ 13 ವರ್ಷ: ಭದ್ರತಾ ತಾಲೀಮು ಆಯೋಜನೆ –ಐಸಿಜಿ ಮುಖ್ಯಸ್ಥ ನಟರಾಜನ್

Last Updated 25 ನವೆಂಬರ್ 2021, 11:16 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈ ಮೇಲೆ 2008ರ ನ.26ರಂದು ಭಯೋತ್ಪಾದಕರ ದಾಳಿ ನಡೆದ ನಂತರ ಕರಾವಳಿ ಭದ್ರತೆಗೆ ಸಂಬಂಧಿಸಿ 300ಕ್ಕೂ ಹೆಚ್ಚು ಅಭ್ಯಾಸಗಳನ್ನು ಕೈಗೊಳ್ಳಲಾಗಿದೆ ಎಂದು ಇಂಡಿಯನ್ ಕೋಸ್ಟ್‌ಗಾರ್ಡ್‌ (ಐಸಿಜಿ) ಪ್ರಧಾನ ನಿರ್ದೇಶಕ ಕೆ.ನಟರಾಜನ್ ಗುರುವಾರ ಇಲ್ಲಿ ಹೇಳಿದರು.

‘ಕರಾವಳಿಯ ರಾಜ್ಯವೊಂದರ ಸಹಯೋಗದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಐಸಿಜಿ ಇಂತಹ ಅಭ್ಯಾಸ ಹಮ್ಮಿಕೊಳ್ಳುತ್ತದೆ’ ಎಂದೂ ಅವರು ಹೇಳಿದರು.

ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಗೆ 13 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.

ರಾಷ್ಟ್ರೀಯ ಸಾಗರ ಶೋಧ ಹಾಗೂ ರಕ್ಷಣಾ ಮಂಡಳಿಯ 19ನೇ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದ ನಂತರ, ಕಡಲ ಭದ್ರತೆ ವಿಷಯದಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಸುಧಾರಣೆಗಳನ್ನು ತಂದಿದೆ’ ಎಂದರು.

‘ಸಹಕಾರ ಹಾಗೂ ಸಮನ್ವಯ ಎಂಬ ಮಂತ್ರದಿಂದ ಮಾತ್ರ ಭವಿಷ್ಯದಲ್ಲಿ ಇಂತಹ ಭಯೋತ್ಪಾದಕ ದಾಳಿ ನಡೆಯದಂತೆ ನೋಡಿಕೊಳ್ಳಲು ಸಾಧ್ಯ’ ಎಂದೂ ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT