ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 86ರಷ್ಟು ತೆರೆದ ಬೋಗಿಗಳನ್ನು ಕಲ್ಲಿದ್ದಲು ಸಾಗಾಟಕ್ಕೆ ಮೀಸಲಿರಿಸಿದ ರೈಲ್ವೆ

Last Updated 4 ಮೇ 2022, 16:25 IST
ಅಕ್ಷರ ಗಾತ್ರ

ನವದೆಹಲಿ: ದೇಶದ ವಿವಿಧೆಡೆಗಳಲ್ಲಿ ಇರುವ ವಿದ್ಯುತ್ ಘಟಕಗಳಿಗೆ ಕಲ್ಲಿದ್ದಲು ಸಾಗಾಟ ಮಾಡಲು ಭಾರತೀಯ ರೈಲ್ವೆಯು ಶೇ 86ರಷ್ಟು ತೆರೆದ ಬೋಗಿಗಳನ್ನು ಮೀಸಲಿರಿಸಿದೆ ಎಂದು ಮೂಲಗಳು ತಿಳಿಸಿವೆ.

1,31,403 ತೆರೆದ ಬೋಗಿಗಳ ಪೈಕಿ 1,13,880 ಬೋಗಿಗಳನ್ನು ಕಲ್ಲಿದ್ದಲು ಸಾಗಾಟಕ್ಕೆ ಮೀಸಲಿರಿಸಲಾಗಿದೆ. ಕಲ್ಲಿದ್ದಲು ಮತ್ತು ವಿದ್ಯುತ್ ಸಚಿವಾಲಯಗಳ ಜತೆ ಚರ್ಚಿಸಿ ರೂಪಿಸಲಾದ ಯೋಜನೆಯ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಸದ್ಯ ರೈಲ್ವೆ ಬಳಿ 3,82,562 ಬೋಗಿಗಳಿದ್ದು ಈ ಪೈಕಿ 1,31,403 ತೆರೆದ ಬೋಗಿಗಳಾಗಿವೆ. ಇವುಗಳಲ್ಲಿ ಮೇ 2ರ ಲೆಕ್ಕಾಚಾರದ ಪ್ರಕಾರ 3,636 ಬೋಗಿಗಳು ದುರಸ್ತಿಯಾಗಬೇಕಿವೆ ಎನ್ನಲಾಗಿದೆ.

ವಿದ್ಯುತ್ ಘಟಕಗಳಿಗೆ ಪೂರೈಕೆಗಾಗಿ ಪ್ರತಿ ದಿನ ಸರಾಸರಿ 28,470 ಬೋಗಿಗಳಲ್ಲಿ ಕಲ್ಲಿದ್ದಲು ಸಾಗಾಟ ಮಾಡಲಾಗುತ್ತಿದೆ. ಕಲ್ಲಿದ್ದಲು ಸಾಗಾಟ ಮಾಡುವ ಒಂದು ರೈಲಿನಲ್ಲಿ ಸಾಮಾನ್ಯವಾಗಿ 84 ಬೋಗಿಗಳು ಇರುತ್ತವೆ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT