ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ 10 ಲಕ್ಷ ಶಾಲೆಗಳ ಆಧುನೀಕರಣಕ್ಕೆ ಯೋಜನೆ ರೂಪಿಸಿ: ಮೋದಿಗೆ ಕೇಜ್ರಿವಾಲ್ ಆಗ್ರಹ

Last Updated 6 ಸೆಪ್ಟೆಂಬರ್ 2022, 12:47 IST
ಅಕ್ಷರ ಗಾತ್ರ

ನವದೆಹಲಿ: ದೇಶದ 14,500 ಶಾಲೆಗಳನ್ನು ಆಧುನಿಕಗೊಳಿಸಲಾಗುವುದು ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಇದು ‘ಸಮುದ್ರದಲ್ಲಿನ ಒಂದು ಹನಿ’ ಮಾತ್ರ ಎಂದು ಮಂಗಳವಾರ ಹೇಳಿದರು. ಜೊತೆಗೆ, ‘ಮುಂದಿನ ಐದು ವರ್ಷಗಳಲ್ಲಿ ದೇಶದ 10 ಲಕ್ಷ ಸರ್ಕಾರಿ ಶಾಲೆಗಳನ್ನೂ ಉನ್ನತೀಕರಿಸಲು ಯೋಜನೆ ಸಿದ್ಧಪಡಿಸಿ’ ಎಂದು ಪ್ರಧಾನಿ ಮೋದಿ ಅವರಿಗೆ ಆಗ್ರಹಿಸಿದರು.

ವಿಡಿಯೊ ಸಂವಾದದ ಮೂಲಕ ಮಂಗಳವಾರ ಪ್ರತಿಕಾಗೋಷ್ಠಿ ನಡೆಸಿದ ಅವರು, ‘ಶಾಲೆಗಳನ್ನು ಆಧುನೀಕರಣಗೊಳಿಸುವ ಪ್ರಧಾನಿ ಮೋದಿ ಅವರ ನಿರ್ಧಾರ ಸ್ವಾಗತಾರ್ಹ. ಆದರೆ, ಇದೇ ದರದಲ್ಲಿ ಶಾಲೆಗಳ ಅಭಿವೃದ್ಧಿ ಕೈಗೊಂಡರೆ, ದೇಶದಲ್ಲಿರುವ 10.5 ಲಕ್ಷ ಶಾಲೆಗಳನ್ನೂ ಆಧುನೀಕರಣಗೊಳಿಸುವಲ್ಲಿ 70–80 ವರ್ಷ ಬೇಕಾಗಬಹುದು’ ಎಂದರು.

‘ಸ್ವಾತಂತ್ರ್ಯ ನಂತರ ದೊಡ್ಡ ತಪ್ಪೊಂದು ನಡೆದಿದೆ. ನಾವು ಉತ್ತಮ ಗುಣಮಟ್ಟದ ಶಿಕ್ಷಣವನ್ನೂ ಶಾಲೆಯನ್ನೂ ದೇಶದ ಪ್ರತಿ ಹಳ್ಳಿ ಹಳ್ಳಿಗೂ ಒದಗಿಸಬಹುದಿತ್ತು. ದೇಶದ ಜನರೆಲ್ಲರೂ ಶಿಕ್ಷಿತರಾಗಿದ್ದರೆ, ಭಾರತವು ಬಡ ರಾಷ್ಟ್ರವಾಗುತ್ತಿರಲಿಲ್ಲ. ಆದ್ದರಿಂದ ದೇಶದ 10.5 ಲಕ್ಷ ಶಾಲೆಗಳನ್ನೂ ಆಧುನಿಕಗೊಳಿಸಲು ಮನವಿ ಮಾಡುತ್ತೇನೆ’ ಎಂದರು.

ಶಿಕ್ಷಕರ ದಿನದಂದು (ಸೋಮವಾರ) ಪ್ರಧಾನಿ ಮೋದಿ ಅವರು ಟ್ವೀಟ್‌ ಮಾಡಿ, ‘ದೇಶದ 14,500 ಶಾಲೆಗಳನ್ನು ‘ಪಿಎಂ–ಶ್ರೀ ಯೋಜನಾ’ ಮೂಲಕ ಆಧುನೀಕರಣಗೊಳಿಸಲಾಗುವುದು. ಶಾಲೆಗಳಿಗೆ ಆಧುನಿಕ ಮೂಲಸೌಕರ್ಯ ಅಂದರೆ ಒತ್ತಮ ಗುಣಮಟ್ಟದ ಪ್ರಯೋಗಾಲಯ, ಸ್ಮಾರ್ಟ್‌ ತರಗತಿ, ಗ್ರಂಥಾಲಯ ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT