ನವದೆಹಲಿ: ಗಣೇಶ ಚತುರ್ಥಿ ಪ್ರಯುಕ್ತ ರಾಷ್ಟ್ರದ ಜನರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭಾಶಯಗಳನ್ನು ತಿಳಿಸಿದ್ದಾರೆ.

‘ಕೋವಿಡ್ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಜನ ಹಬ್ಬ ಆಚರಿಸಬೇಕು‘ ಎಂದು ಅವರು ಕರೆ ನೀಡಿದ್ಧಾರೆ.

‘ಜ್ಞಾನ, ಸಮೃದ್ಧಿ ಹಾಗೂ ಅದೃಷ್ಟದ ಸಂಕೇತವಾದ ಗಣೇಶ ಹಬ್ಬವು ಸಂಭ್ರಮದಿಂದ ಕೂಡಿದ್ದು,ಈ ವರ್ಷ ಗಣೇಶ ಚತುರ್ಥಿಯ ಸಂದರ್ಭದಲ್ಲಿ, ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಹೋರಾಟವನ್ನು ಯಶಸ್ವಿಗೊಳಿಸಲು ಮತ್ತು ನಮ್ಮೆಲ್ಲರಿಗೂ ಸಂತೋಷ ಹಾಗೂ ಶಾಂತಿಯನ್ನು ದಯಪಾಲಿಸಲು ನಾವು ಗಣೇಶನನ್ನು ಪ್ರಾರ್ಥಿಸೋಣ‘ ಎಂದು ರಾಷ್ಟ್ರಪತಿ ಹೇಳಿದ್ದಾರೆ.

‘ಈ ಹಬ್ಬವನ್ನು ನಾವು ಉತ್ಸಾಹ ಮತ್ತು ಸಾಮರಸ್ಯದ ವಾತಾವರಣದಲ್ಲಿ ಕೋವಿಡ್‌ಗೆ ಸೂಕ್ತವಾದ ಮುನ್ನೆಚ್ಚರಿಕೆಯಿಂದ ಆಚರಿಸೋಣ‘ ಎಂದು ಅವರು ಹೇಳಿದ್ದಾರೆ. ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರಿಗೂರಾಷ್ಟ್ರಪತಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.