ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಲ್‌ ಬಿಪಿನ್ ರಾವತ್ ಸೇರಿ 54 ಗಣ್ಯರಿಗೆ ಪದ್ಮ ಪುರಸ್ಕಾರ ಪ್ರದಾನ

Last Updated 22 ಮಾರ್ಚ್ 2022, 1:55 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕರ್ನಾಟಕದ ಐವರು ಗಣ್ಯರು ಸೇರಿದಂತೆ 2022ನೇ ಸಾಲಿನಲ್ಲಿ ಪದ್ಮ ಪುರಸ್ಕಾರಗಳಿಗೆ ಭಾಜನರಾದ 54 ಗಣ್ಯರಿಗೆ ಸೋಮವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಭಾರತದ ಸಶಸ್ತ್ರಪಡೆಗಳಮೊದಲ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಹಿಂದೂ ಧಾರ್ಮಿಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ಗೀತಾ ಪ್ರೆಸ್ ಮಾಜಿ ಮುಖ್ಯಸ್ಥ ರಾಧೆಶ್ಯಾಮ್ ಖೆಮ್ಕಾ ಅವರಿಗೆ ಮರಣೋತ್ತರವಾಗಿದೇಶದ 2ನೇ ನಾಗರಿಕ ಪುರಸ್ಕಾರವಾದ ಪದ್ಮವಿಭೂಷಣ ನೀಡಲಾಗಿದೆ. ಇನ್ನು ಕಾಂಗ್ರೆಸ್ ನಾಯಕ ಗುಲಾಂ ಆಜಾದ್, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್, ಮಾಜಿ ಸಿಎಜಿ ಮೆಹ್ರೆಷಿ, ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಮಾಡಿದ ಸೀರಂ ಸಂಸ್ಥೆಯ ಸಂಸ್ಥಾಪಕ ಸೈರಸ್ ಪೂನಾವಾಲ ಅವರು ಸೇರಿದಂತೆ 8 ಗಣ್ಯರಿಗೆ ದೇಶದ 3ನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮಭೂಷಣ ಪ್ರದಾನ ಮಾಡಲಾಗಿದೆ.

ಇದರಲ್ಲಿ ಕರ್ನಾಟಕದ ಸುಬ್ಬಣ್ಣ ಅಯ್ಯಪ್ಪನ್, ಎಚ್. ಆರ್. ಕೇಶವಮೂರ್ತಿ, ಅಬ್ದುಲ್ ಖಾದರ್ ನಾಡಕಟ್ಟಿನ್, ಸಿದ್ದಲಿಂಗಯ್ಯ(ಮರಣೋತ್ತರವಾಗಿ) ಹಾಗೂ ಅಮೈ ಮಹಾಲಿಂಗ ನಾಯಕ್ ಅವರಿಗೆ ಪದ್ಮಶ್ರೀ ಪುರಸ್ಕಾರ ಪ್ರದಾನ ಮಾಡಲಾಗಿದೆ.

ದೇಶದ ಪ್ರಥಮ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತ ರತ್ನವನ್ನು ಈ ವರ್ಷ ಯಾರಿಗೂ ಘೋಷಣೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT