ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಸಚಿವ ಹೇಳಿದ ವೃತ್ತಾಂತ ಹಂಚಿಕೊಂಡ ಪ್ರಧಾನಿ ಮೋದಿ

Last Updated 12 ಮಾರ್ಚ್ 2023, 13:06 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಬ್ಬೆನೀಸ್‌ ಅವರನ್ನು ಜತೆಗೂಡಿದ್ದ ಆಸ್ಟ್ರೇಲಿಯಾ ಪ್ರವಾಸೋದ್ಯಮ ಮತ್ತು ವಾಣಿಜ್ಯ ಸಚಿವ ಡಾನ್‌ ಫರ್ರೆಲ್‌ ಅವರು ಹಂಚಿಕೊಂಡಿದ್ದ ವೃತ್ತಾಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ. ಈ ವೃತ್ತಾಂತವು ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಸಾಂಸ್ಕೃತಿಕ ಬಾಂಧವ್ಯದ ಕುರಿತು ಒತ್ತಿ ಹೇಳುತ್ತದೆ ಎಂದಿದ್ದಾರೆ.

ಸಂಭಾಷಣೆಯನ್ನು ಸರಣಿ ಟ್ವೀಟ್ ಮೂಲಕ ಹಂಚಿಕೊಂಡಿರುವ ಅವರು, ‘ನನ್ನ ಮಿತ್ರ ಅಲ್ಬನೀಸ್‌ ಜೊತೆ ಔತಣದ ವೇಳೆ ಆಸ್ಟ್ರೇಲಿಯಾ ಸಚಿವ ಡಾನ್‌ ಫೆರ್ರರ್‌ ಅವರು ಒಂದು ಆಸಕ್ತಿದಾಯಕ ಸಂಗತಿ ಹಂಚಿಕೊಂಡರು. ಭಾರತದ ಗೋವಾದಿಂದ ಆಸ್ಟ್ರೇಲಿಯಾಕ್ಕೆ ಸ್ಥಳಾಂತರವಾಗಿದ್ದ ಶ್ರೀಮತಿ ಎಬರ್ಟ್‌ ಎಂಬುವವರು ಫೆರ್ರೆಲ್‌ ಅವರ ಶಾಲಾ ಶಿಕ್ಷಕಿಯಾಗಿದ್ದರು. ಎಬರ್ಟ್‌ ಅವರು ನನ್ನ ಮೇಲೆ ಗಾಢವಾದ ಪರಿಣಾಮ ಬೀರಿದ್ದಾರೆ. ನನ್ನ ಶೈಕ್ಷಣಿಕ ತಳಹದಿಯನ್ನು ಅವರೇ ಹಾಕಿಕೊಟ್ಟವರು ಎಂದು ಫೆರ್ರರ್‌ ಹೇಳಿದ್ದಾರೆ’ ಎಂದು ಮೊದಲ ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಶ್ರೀಮತಿ ಎಬರ್ಟ್‌, ಅವರ ಪತಿ ಮತ್ತು ಮಗಳು ಲಿಯೋನಿ 1950ರಲ್ಲಿ ಗೋವಾದಿಂದ ಆಸ್ಟ್ರೇಲಿಯಾಕ್ಕೆ ವಲಸೆ ಬಂದಿದ್ದರು. ಲಿಯೋನಿ, ಸೌಥ್‌ ಆಸ್ಟ್ರೇಲಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೀಚರ್ಸ್‌ನ ಅಧ್ಯಕ್ಷೆ ಆಗಿದ್ದರು’ ಎಂದು ಫರ್ರೆಲ್‌ ಹೇಳಿದರು.

‘ಈ ವೃತ್ತಾಂತ ಕೇಳಿ ತುಂಬಾ ಸಂತೋಷವಾಯಿತು. ಇದು ಭಾರತ– ಆಸ್ಟ್ರೇಲಿಯಾ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಸಾರುತ್ತದೆ ಮತ್ತು ವ್ಯಕ್ತಿಯೊಬ್ಬರು ತಮ್ಮ ಗುರುಗಳನ್ನು ಪ್ರೀತಿಯಿಂದ ನೆನೆಯುವುದು ಹೃದ್ಯವಾಗಿದೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT