ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಗ್‌ರಾಜ್‌ ಹಿಂಸಾಚಾರದ 'ಸೂತ್ರಧಾರ' ಜಾವೇದ್ ಅಹ್ಮದ್ ಮನೆಗೆ ಬುಲ್ಡೋಜರ್!

Last Updated 12 ಜೂನ್ 2022, 7:55 IST
ಅಕ್ಷರ ಗಾತ್ರ

ಲಖನೌ:ಪ್ರಯಾಗ್‌ರಾಜ್‌ ಅಭಿವೃದ್ಧಿ ಪ್ರಾಧಿಕಾರವು (ಪಿಡಿಎ) 'ವೆಲ್‌ಫೇರ್‌ ಪಕ್ಷ'ದ ನಾಯಕಜಾವೇದ್‌ ಅಹ್ಮದ್‌ ಅವರ ಮನೆ ತೆರವು ಕಾರ್ಯಾಚರಣೆಯನ್ನು ಭಾನುವಾರ ಆರಂಭಿಸಿದೆ.ಭದ್ರತೆಗೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಾಧಿಕಾರವು ಅಹ್ಮದ್‌ ಅವರಮನೆ ಕೆಡವುವುದಕ್ಕೆ ಸಂಬಂಧಿಸಿದ ನೋಟಿಸ್‌ ಅಂಟಿಸಿತ್ತು. ಮನೆಯನ್ನು 'ಅಕ್ರಮವಾಗಿ ನಿರ್ಮಿಸಲಾಗಿದೆ'. ಇಂದು (ಭಾನುವಾರ) ಬೆಳಗ್ಗೆ 11ರ ಒಳಗೆ ಮನೆ ಖಾಲಿ ಮಾಡಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿತ್ತು. ಸದ್ಯಬುಲ್ಡೋಜರ್‌ ಕಾರ್ಯಾಚರಣೆ ಆರಂಭವಾಗಿದೆ.

ಪ್ರವಾದಿ ಮಹಮ್ಮದ್‌ ಕುರಿತಂತೆ ನೀಡಿದ್ದ ಅವಹೇಳನಕಾರಿ ಹೇಳಿಕೆ ಸಂಬಂಧ ನೂಪುರ್‌ ಶರ್ಮಾ ಅವರ ಬಂಧನಕ್ಕೆ ಆಗ್ರಹಿಸಿ ಶುಕ್ರವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಜಾವೇದ್‌ ಅಹ್ಮದ್‌, ಪ್ರಯಾಗ್‌ರಾಜ್‌ನಲ್ಲಿ ನಡೆದ ಹಿಂಸಾಚಾರದ 'ಸೂತ್ರಧಾರ' ಎಂದು ಉತ್ತರ ಪ್ರದೇಶ ಪೊಲೀಸರು ಶನಿವಾರವಷ್ಟೇ ಹೇಳಿದ್ದರು.

‌‌ಪ್ರಯಾಗ್‌ರಾಜ್‌ ಹಳೆ ನಗರದ ಕರೇಲಿ ಪ್ರದೇಶದಲ್ಲಿರುವಜೆ.ಕೆ ಅಶೀನಾ ಕಾಲೊನಿಯ ನಿವಾಸಿಯಾಗಿರುವ ಅಹ್ಮದ್‌ ಅವರನ್ನು ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಲಾಗಿದೆ.

ಜಾವೇದ್‌ ಅಹ್ಮದ್‌ ಬಂಧನದ ಮಾಹಿತಿ ನೀಡಿದ್ದಪ್ರಯಾಗ್‌ರಾಜ್‌ನ ಹಿರಿಯ ಸೂಪರಿಂಟೆಂಡ್‌ ಆಫ್‌ ಪೊಲೀಸ್‌ (ಎಸ್‌ಎಸ್‌ಪಿ) ಅಜಯ್‌ ಕುಮಾರ್‌,'ಗಲಭೆ ಪ್ರಕರಣದ ಸೂತ್ರಧಾರನನ್ನು ಬಂಧಿಸಲಾಗಿದೆ. ಪೊಲೀಸರು ಮತ್ತು ಅಧಿಕಾರಿಗಳತ್ತ ಕಲ್ಲು ತೂರಲು ಸಣ್ಣ ಮಕ್ಕಳನ್ನು ಬಳಸಿಕೊಳ್ಳುವ ಇಂತಹ ಇನ್ನೂ ಹಲವು ಮಾಸ್ಟರ್‌ಮೈಂಡ್‌ಗಳು ಇರಬಹುದು. 29 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಾಗಿದೆ. ಗ್ಯಾಂಗ್‌ಸ್ಟರ್‌ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT