ಗುರುವಾರ , ಜೂನ್ 30, 2022
23 °C

ಕಪ್ಪು ಶಿಲೀಂಧ್ರ ಚಿಕಿತ್ಸೆಗಾಗಿ ಚುಚ್ಚುಮದ್ದನ್ನು ಉಚಿತವಾಗಿ ನೀಡಿ: ಪ್ರಿಯಾಂಕಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಪ್ಪು ಶೀಲೀಂಧ್ರ (ಬ್ಲ್ಯಾಕ್ ಫಂಗಸ್) ಎಂದೂ ಕರೆಯಲ್ಪಡುವ ಮ್ಯೂಕರ್‌ ಮೈಕೊಸಿಸ್ ವರ್ಧಿಸುತ್ತಿರುವ ಮಧ್ಯೆ ಇದರ ಚಿಕಿತ್ಸೆಗಾಗಿ ಚುಚ್ಚುಮದ್ದನ್ನು ಉಚಿತವಾಗಿ ರೋಗಿಗಳಿಗೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮನವಿ ಮಾಡಿದ್ದಾರೆ.

ಪ್ರತಿ ರಾಜ್ಯದಲ್ಲೂ ಈ ರೋಗದಿಂದ ಬಳಲುತ್ತಿರುವ ಒಟ್ಟು ರೋಗಿಗಳ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆಯೂ ವಿನಂತಿ ಮಾಡಿದ್ದಾರೆ.

ಶೇಕಡಾ 50ರಷ್ಟು ಸಾವಿನ ಪ್ರಮಾಣವನ್ನು ಹೊಂದಿರುವ ಮ್ಯೂಕರ್‌ ಮೈಕೊಸಿಸ್ ರೋಗಿಗಳ ಸಂಖ್ಯೆ ದೇಶದಲ್ಲಿ 11,000 ದಾಟಿದೆ. ಅಲ್ಲದೆ ಚುಚ್ಚು ಮದ್ದಿನ ಕೊರತೆಯಿದೆ ಎಂದವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: 

ರೋಗವನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರದ ಇಚ್ಛಾಶಕ್ತಿಯನ್ನು ಪ್ರಶ್ನಿಸಿರುವ ಅವರು ಚಿಕಿತ್ಸೆ ಪಡೆಯುವವರಿಗೆ ಚುಚ್ಚುಮದ್ದು ಸಿಗುತ್ತಿಲ್ಲ. ಜನರ ಸಂಕಟವನ್ನು ನೀಗಿಸಲು ಬೇಕಾದ ಕ್ರಮಗಳನ್ನು ಏಕೆ ಕೈಗೊಂಡಿಲ್ಲ ಎಂದು ಟೀಕಿಸಿದ್ದಾರೆ.

 

 

 

ಪ್ರಧಾನಿಗೆ ಮಾಡಿರುವ ಮನವಿಯಲ್ಲಿ ಮ್ಯೂಕರ್‌ ಮೈಕೊಸಿಸ್ ಚಿಕಿತ್ಸೆಗೆ ಬಳಸುವ ಚುಚ್ಚುಮದ್ದು ದುಬಾರಿಯಾಗಿದೆ ಎಂಬ ಜನರ ಅಹವಾಲುಗಳನ್ನು ಉಲ್ಲೇಖಿಸಿದ್ದಾರೆ. ಈ ರೋಗವು ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿಯಲ್ಲಿ ಒಳಗಾಗದ ಕಾರಣ ರೋಗಿಗಳು ಚುಚ್ಚು ಮದ್ದಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಇದಕ್ಕೆ ಯಾರು ಹೊಣೆ? ಪ್ರಧಾನಿ ಅವರೇ ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

 

ಇಂದೋರ್‌ನ ಮಗುವೊಂದು ತನ್ನ ತಂದೆಗೆ ಚುಚ್ಚುಮದ್ದಿಗಾಗಿ ಮನವಿ ಮಾಡುತ್ತಿರುವ ವಿಡಿಯೊವನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು