ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌: ಎರಡು ಕ್ಷೇತ್ರಗಳಿಂದ ಚನ್ನಿ ಸ್ಪರ್ಧೆ

Last Updated 30 ಜನವರಿ 2022, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಎರಡು ಕ್ಷೇತ್ರಗಳಿಂದ ಕಣಕ್ಕೆ ಇಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ. ಚನ್ನಿ ಅವರು ಈಗ ಪ್ರತಿನಿಧಿಸುತ್ತಿರುವ ಚಮಕೌರ್‌ ಸಾಹಿಬ್‌ ಕ್ಷೇತ್ರದಿಂದ ಅವರಿಗೆ ಈಗಾಗಲೇ ಟಿಕೆಟ್‌ ಪ್ರಕಟಿಸಲಾಗಿದೆ. ಈಗ, ಭಾದೌರ್‌ ಕ್ಷೇತ್ರದಿಂದಲೂ ಅವರಿಗೆ ಟಿಕೆಟ್‌ ನೀಡಲಾಗಿದೆ.

ಎಂಟು ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಕಾಂಗ್ರೆಸ್‌ ಭಾನುವಾರ ಪ‍್ರಕಟಿಸಿದೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು ಸ್ಪರ್ಧಿಸುತ್ತಿರುವ ಪಟಿಯಾಲಾ ಕ್ಷೇತ್ರದಿಂದ ಪಟಿಯಾಲಾದ ಮಾಜಿ ಮೇಯರ್‌ ವಿಷ್ಣು ಶರ್ಮಾ ಅವರನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಿದೆ. ಶರ್ಮಾ ಅವರು ಒಂದು ಕಾಲದಲ್ಲಿ ಅಮರಿಂದರ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರು.

ಕೇಂದ್ರದ ಮಾಜಿ ಸಚಿವ ಪವನ್‌ ಕುಮಾರ್‌ ಬನ್ಸಲ್‌ ಅವರ ಮಗ ಮನೀಶ್‌ ಬನ್ಸಲ್‌ ಅವರಿಗೆ ಬರ್ನಾಲಾ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಶಿರೋಮಣಿ ಅಕಾಲಿದಳದ ಸುಖಬೀರ್ ಸಿಂಗ್‌ ಬಾದಲ್‌ ವಿರುದ್ಧ ಮೋಹನ್‌ ಸಿಂಗ್‌ ಫಲಿಯನ್‌ವಾಲಾ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ.

ಪೆ. 20ರಂದು ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT