ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ನ ಸರ್ಕಾರಿ ಶಾಲೆಗಳ 36 ಪ್ರಾಂಶುಪಾಲರು ತರಬೇತಿಗಾಗಿ ಸಿಂಗಪುರಕ್ಕೆ ಪಯಣ

Last Updated 4 ಫೆಬ್ರುವರಿ 2023, 6:55 IST
ಅಕ್ಷರ ಗಾತ್ರ

ಚಂಡಿಗಢ: ವೃತ್ತಿಪರ ತರಬೇತಿಗಾಗಿ 36 ಮಂದಿ ಸರ್ಕಾರಿ ಶಾಲೆಗಳ ಪ್ರಾಂಶುಪಾಲರನ್ನು ಸಿಂಗಪುರ ಪ್ರವಾಸಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಕಳುಹಿಸಿಕೊಟ್ಟರು.

ಫೆಬ್ರುವರಿ 6ರಿಂದ 10ವರೆಗೆ ಸಿಂಗಪುರದಲ್ಲಿ ವೃತ್ತಿಪರ ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲಿ ಪ್ರಾಂಶುಪಾಲರು ಭಾಗವಹಿಸಲಿದ್ದಾರೆ.

ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಗಲಿದೆ ಎಂದು ಕಳೆದ ವರ್ಷದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ಭರವಸೆ ನೀಡಿತ್ತು.

‘ಇಂದು ಪಂಜಾಬ್‌ನ 36 ಶಾಲೆಗಳ ಪ್ರಾಂಶುಪಾಲರು ಸಿಂಗಪುರಕ್ಕೆ ತೆರಳುತ್ತಿದ್ದಾರೆ. ಅಲ್ಲಿ ಅವರು ಐದು ದಿನಗಳ ಶಿಕ್ಷಕರ ವೃತ್ತಿಪರ ತರಬೇತಿ ಶಿಬಿರಗಳಲ್ಲಿ ಭಾಗವಹಿಸಲಿದ್ದಾರೆ. ಸಿಂಗಪುರದ ಪ್ರಿನ್ಸಿಪಾಲ್‌ಗಳ ಅಕಾಡೆಮಿಯಲ್ಲಿ ಶಿಕ್ಷಣ ವಲಯದ ಹೊಸ ತಂತ್ರಗಳ ಬಗ್ಗೆ ಅವರು ತರಬೇತಿ ಪಡೆಯಲಿದ್ದಾರೆ’ ಎಂದು ಮಾನ್ ಹೇಳಿದರು.

ಫೆಬ್ರುವರಿ 11ರಂದು ಹಿಂದಿರುಗಲಿರುವ ಮೊದಲ ತಂಡ, ತಮ್ಮ ಸಹೋದ್ಯೋಗಿಗಳ ಜೊತೆ ತರಬೇತಿಯ ಮಾಹಿತಿ ವಿನಿಮಯ ಮಾಡಿಕೊಳ್ಳಲಿದೆ ಎಂದು ಅವರು ಹೇಳಿದರು.

‘ನಮ್ಮಲ್ಲಿ ಒಳ್ಳೆಯ ಶಿಕ್ಷಕರಿದ್ದಾರೆ. ಆದರೆ, ಅವರು ಅಪ್ಡೇಟ್ ಆಗಬೇಕಾದ ಅಗತ್ಯವಿದೆ. ಆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT