ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ ಮುಖ್ಯಮಂತ್ರಿ ಪುತ್ರ ರಣಿಂದರ್‌ ಸಿಂಗ್‌ ಇಡಿ ವಿಚಾರಣೆಗೆ ಹಾಜರು

Last Updated 20 ನವೆಂಬರ್ 2020, 3:34 IST
ಅಕ್ಷರ ಗಾತ್ರ

ಚಂಡೀಗಡ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಎಫ್‌ಇಎಂಎ) ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರ ಪುತ್ರ ರಣಿಂದರ್ ಸಿಂಗ್ ಗುರುವಾರ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾದರು.

ಜಲಂದರ್‌ನಲ್ಲಿರುವ ಇಡಿ ಕಚೇರಿಯಲ್ಲಿ ರಣಿಂದರ್‌ ಸಿಂಗ್‌ ವಿಚಾರಣೆಗೆ ಹಾಜರಾಗಿದ್ದರು. ಇವರೊಂದಿಗೆ ಕಾಂಗ್ರೆಸ್‌ ವಕ್ತಾರ ಜೈವೀರ್‌ ಶೇರ್‌ಗಿಲ್‌ ಮತ್ತು ವಕೀಲರು ಇದ್ದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ವಿದೇಶದಲ್ಲಿ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ರಣಿಂದರ್‌ ಸಿಂಗ್‌ ವಿರುದ್ಧ ಇ.ಡಿ. ಎಫ್‌ಇಎಂಎ ಅಡಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದಡಿ ವಿಚಾರಣೆಗೆ ಹಾಜರಾಗುವಂತೆ ಇಡಿ ರಣಿಂದರ್‌ ಸಿಂಗ್‌ಗೆಸಮನ್ಸ್‌ ಜಾರಿ ಮಾಡಿತ್ತು.

ಈ ಹಿಂದೆ ಅಕ್ಟೋಬರ್‌ 27 ಮತ್ತು ನವೆಂಬರ್‌ 6 ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸೂಚಿಸಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

2016ರಲ್ಲಿಯೂ ರಣಿಂದರ್‌ ಸಿಂಗ್‌ ಅವರನ್ನು ಇ.ಡಿ. ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಸ್ವಿಟ್ಜರ್ಲೆಂಡ್‌ನಲ್ಲಿ ಹಣದ ವರ್ಗಾವಣೆ ಮತ್ತು ಬ್ರಿಟಿಷ್‌ ವರ್ಜಿನ್‌ ದ್ವೀಪಗಳಲ್ಲಿ ತನ್ನ ಕಂಪನಿಯ ಅಂಗಸಂಸ್ಥೆ ಮತ್ತು ಟ್ರಸ್ಟ್‌ ರಚನೆಯ ಬಗ್ಗೆ ಪ್ರಶ್ನಿಸಿತ್ತು.

ವಿದೇಶದಲ್ಲಿ ಬಹಿರಂಗಪಡಿಸದ ಆಸ್ತಿ ಹೊಂದಿರುವ ಪ್ರಕರಣವನ್ನು ಮೊದಲು ಆದಾಯ ಇಲಾಖೆಯು ತನಿಖೆ ನಡೆಸಿತ್ತು. ಈ ವೇಳೆ ರಣಿಂದರ್‌ ಸಿಂಗ್‌ ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT