ಶನಿವಾರ, ಜುಲೈ 2, 2022
20 °C

ಕೆಂಪು ಕೋಟೆ ಹಿಂಸಾಚಾರದ ಆರೋಪಿ, ಪಂಜಾಬಿ ನಟ ದೀಪ್‌ ಸಿಧು ಅಪಘಾತದಲ್ಲಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಸೋನಿಪತ್‌: ದೆಹಲಿಯ ಕೆಂಪು ಕೋಟೆಯಲ್ಲಿ 2021ರಲ್ಲಿ ನಡೆದ ಹಿಂಸಾಚಾರ ಘಟನೆಯ ಆರೋಪಿ, ಪಂಜಾಬಿ ನಟ ಮತ್ತು ಹೋರಾಟಗಾರ ದೀಪ್‌ ಸಿಧು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ಹರಿಯಾಣದ ಸೋನಿಪತ್‌ನ ಪಿಪ್ಲಿ ಟೋಲ್‌ ಸಮೀಪ ದೀಪ್‌ ಸಿಧು ಅವರ ಕಾರು ನಿಂತಿದ್ದ ಟ್ರಕ್‌ಗೆ ಗುದ್ದಿದೆ. ಆ ಅಪಘಾತದಲ್ಲಿ ದೀಪ್‌ ಸಿಧು ಮೃತಪಟ್ಟಿರುವುದಾಗಿ ಸೋನಿಪತ್‌ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಗಣರಾಜ್ಯೋತ್ಸವದ ದಿನದಂದು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್‌ ರ್‍ಯಾಲಿಯಲ್ಲಿ ಪ್ರತಿಭಟನಾಕಾರರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದ ಆರೋಪದ ಮೇಲೆ ಕಳೆದ ವರ್ಷ ಫೆಬ್ರುವರಿ 9ರಂದು ದೀಪ್‌ ಸಿಧು ಅವರನ್ನು ಬಂಧಿಸಲಾಗಿತ್ತು.

ಟ್ರ್ಯಾಕ್ಟರ್‌ ರ್‍ಯಾಲಿಯು ಹಿಂಸಾಚಾರಕ್ಕೆ ತಿರುಗಿ, ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಉರುಳಿಸಿದ್ದರು ಹಾಗೂ ಪೊಲೀಸರೊಂದಿಗೆ ಘರ್ಷಣೆ ನಡೆದಿತ್ತು. ನೂರಾರು ಮಂದಿ ಕೆಂಪು ಕೋಟೆಗೆ ನುಗ್ಗಿದ್ದರು ಹಾಗೂ ಆಸ್ತಿಗಳಿಗೆ ಹಾನಿ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು