ಗುರುವಾರ , ಆಗಸ್ಟ್ 5, 2021
28 °C
ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆ ಆದೇಶ

ಮುಂಗಾರು ಹಂಗಾಮಿನಲ್ಲಿ ಪಿಡಬ್ಲ್ಯುಡಿ ಸಿಬ್ಬಂದಿಗೆ ರಜೆ ಇಲ್ಲ

‍ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂಗಾರು ಹಂಗಾಮಿನಲ್ಲಿ ರಾಷ್ಟ್ರ ರಾಜಧಾನಿಯನ್ನು ಜಲದಿಗ್ಭಂಧನದಿಂದ ಮುಕ್ತವಾಗಿಡಲು ಅಗತ್ಯ ಸಿದ್ಧತೆ ನಡೆಸುವುದಕ್ಕಾಗಿ ಇಲಾಖೆ ಯಾವ ವಲಯದ ಸಿಬ್ಬಂದಿಯೂ ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಲೋಕೋಪಯೋಗಿ (ಪಿಡಬ್ಲ್ಯೂಡಿ) ಇಲಾಖೆ ಪ್ರಕಟಿಸಿದೆ.

ದೆಹಲಿ ಸರ್ಕಾರದ ಪಿಡಬ್ಲ್ಯೂಡಿ ಕಚೇರಿ ಹೊರಡಿಸಿರುವ ಆದೇಶದ ಅನ್ವಯ, ‘ತುಂಬಾ ತುರ್ತು ಪರಿಸ್ಥಿತಿ ಅಥವಾ ಕೆಲವೊಂದು ಅನಿವಾರ್ಯ ಪ್ರಸಂಗಗಳಲ್ಲಿ ರಜೆ ತೆಗೆದುಕೊಳ್ಳಬೇಕಾದರೆ, ಮುಖ್ಯ ಎಂಜಿನಿಯರ್‌ ಅವರಿಂದ ಮೊದಲೇ ಅನುಮತಿ ಪಡೆದಿರಬೇಕು‘ ಎಂದಿದೆ.

‘ಮುಂಗಾರು ಹಂಗಾಮನ್ನು ದೃಷ್ಟಿಯಲ್ಲಿರಿಸಿಕೊಂಡು, ರಸ್ತೆ ನಿರ್ವಹಣೆ ಘಟಕ ಮತ್ತು ಎಲೆಕ್ಟ್ರಿಕಲ್ ಘಟಕಗಳ ನಿರ್ವಹಣಾ ಕೊಠಡಿ, ತ್ಯಾಜ್ಯ ನೀರು ಎತ್ತುವ ಪಂಪ್‌ ಹೌಸ್‌ಗಳು ಸೇರಿದಂತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ರಜೆ ತೆಗೆದುಕೊಳ್ಳಲು ಅನುಮತಿ ಇಲ್ಲ‘ ಎಂದು ಆದೇಶದಲ್ಲಿ ಹೇಳಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು