ಮಂಗಳವಾರ, ಮಾರ್ಚ್ 21, 2023
27 °C

ಗಣರಾಜ್ಯೋತ್ಸವ: ಡ್ರೋನ್‌,ಪ್ಯಾರಾಗ್ಲೈಡರ್‌ ಹಾರಾಟ ನಿಷೇಧ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಮುಂಜಾಗ್ರತೆಯಾಗಿ ರಾಜಧಾನಿಯಲ್ಲಿ ಡ್ರೋನ್, ಪ್ಯಾರಾಗ್ಲೈಡರ್‌, ಹಾಟ್ ಏರ್‌ ಬಲೂನ್‌ಗಳ ಹಾರಾಟವನ್ನು ದೆಹಲಿ ಪೊಲೀಸರು ನಿಷೇಧಿಸಿದ್ದಾರೆ.

ಫೆ.15ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಅಸಾಂಪ್ರಾದಾಯಿಕ ವೈಮಾನಿಕ ಪರಿಕರ ಬಳಸಿ ವಿಧ್ವಂಸಕ ಶಕ್ತಿಗಳು ಜನತೆ, ಆಹ್ವಾನಿತರಿಗೆ ಅಪಾಯ ಒಡ್ಡಬಹುದು ಎಂಬ ಹಿನ್ನೆಲೆಯಲ್ಲಿ ಈ ಕ್ರಮವಹಿಸಿದೆ ಎಂದು ತಿಳಿಸಿದೆ.

ನಿಷೇಧಾಜ್ಞೆ ಉಲ್ಲಂಘಿಸಿ ಇವುಗಳ ಹಾರಾಟಕ್ಕೆ ಮುಂದಾಗಿರುವುದು ಕಂಡುಬಂದಲ್ಲಿ ಐಪಿಸಿ ಸೆಕ್ಷನ್ 188ರ ಮೊಕದ್ದಮೆ ದಾಖಲಿಸಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಸಂಜಯ್‌ ಅರೋರಾ ಆದೇಶದಲ್ಲಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು