ಶುಕ್ರವಾರ, ಡಿಸೆಂಬರ್ 9, 2022
21 °C

ಪೇರಂಬ್ರದಿಂದ ‘ಭಾರತ್ ಜೋಡೊ’ ಪುನರಾರಂಭಿಸಿದ ರಾಹುಲ್ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತ್ರಿಶ್ಯೂರ್: ಒಂದು ದಿನದ ವಿಶ್ರಾಂತಿಯ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ಪೇರಂಬ್ರದಿಂದ ‘ಭಾರತ್ ಜೋಡೊ ಯಾತ್ರೆ’ಯನ್ನು ಶನಿವಾರ ಪುನರಾರಂಭಿಸಿದರು.  

ಯಾತ್ರೆಯ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ರಾಹುಲ್ ಅವರೊಂದಿಗೆ ಪಾಲ್ಗೊಂಡರು. 

‘ಒಂದು ದಿನದ ವಿಶ್ರಾಂತಿಯ ನಂತರ, ಭಾರತ್ ಜೋಡೊ ಯಾತ್ರೆಯ 17ನೇ ದಿನವು ಇಂದು ಬೆಳಗ್ಗೆ 6.35ರ ಸುಮಾರಿಗೆ ತ್ರಿಶ್ಯೂರ್‌ ಜಿಲ್ಲೆಯ ಪೇರಂಬ್ರ ಜಂಕ್ಷನ್‌ನಿಂದ ಪ್ರಾರಂಭವಾಯಿತು’ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ವಿಶ್ರಾಂತಿ ದಿನವಾದ ಶುಕ್ರವಾರ ಚಾಲಕುಡಿಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಹಾಗೂ ಸೇವಾದಳದ ತಂಡಕ್ಕೆ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿತ್ತು. ಸೆಪ್ಟೆಂಬರ್ 7ರಂದು ಯಾತ್ರೆ ಆರಂಭವಾದ ನಂತರ ಇದು ಎರಡನೇ ವಿಶ್ರಾಂತಿ ದಿನವಾಗಿತ್ತು.

ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಯು 150 ದಿನಗಳಲ್ಲಿ 3,570 ಕಿ.ಮೀ ಕ್ರಮಿಸಲಿದೆ. ಕೇರಳದ ಮೂಲಕ ಸಾಗಿಬರುವ ಯಾತ್ರೆಯು ಅಕ್ಟೋಬರ್ 1ರಂದು ಕರ್ನಾಟಕವನ್ನು ಪ್ರವೇಶಿಸಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು