ನವದೆಹಲಿ: ದುರ್ಬಲವರ್ಗದವರಿಗೆ ಕನಿಷ್ಠ ಆದಾಯ ಖಾತರಿ ನೀಡಿ, ದೇಶವನ್ನು ಸಂಪೂರ್ಣ ಲೌಕ್ಡೌನ್ ಮಾಡುವುದೊಂದೇ ಕೊರೊನಾ ಸೋಂಕು ಹರಡದಂತೆ ತಡೆಯಲು ಇರುವ ಏಕೈಕ ದಾರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.

‘ಕೇಂದ್ರ ಸರ್ಕಾರಕ್ಕೆ ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ದುರ್ಬಲ ವರ್ಗದವರಿಗೆ ಕನಿಷ್ಠ ಆದಾಯದ ಖಾತರಿ ನೀಡುವ ‘ಎನ್ವೈಎವೈ–ನ್ಯಾಯ್’ ಯೋಜನೆಯ ರಕ್ಷಣೆ ನೀಡಿ, ದೇಶವನ್ನು ಪೂರ್ಣ ಲಾಕ್ಡೌನ್ ಮಾಡಿದರೆ, ಕೊರೊನಾ ಸೋಂಕು ಹರಡುವುದನ್ನು ತಡೆಯಬಹುದಾಗಿದೆ‘ ಎಂದು ಅವರು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.

‘ಕೇಂದ್ರ ಸರ್ಕಾರ ಹಲವು ಅಮಾಯಕ ಜನರನ್ನು ಕೊಲ್ಲುತ್ತಿದೆ’ ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಭಾಗಶಃ ಕರ್ಫ್ಯೂ, ಪ್ರಯಾಣ ನಿರ್ಬಂಧಗಳು, ಅಂಗಡಿಗಳನ್ನು ಮುಚ್ಚಿಸುವುದು ಮತ್ತು ಲಾಕ್ಡೌನ್ನಂತಹ ಕ್ರಮಗಳ ಮೊರೆ ಹೋಗುತ್ತಿವೆ. ಇದರಿಂದ ಬಡವರ ಆರ್ಥಿಕ ಚಟುವಟಿಕೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆದ್ದರಿಂದ ಲಾಕ್ಡೌನ್ ಘೋಷಿಸಿ, ದುರ್ಬಲ ವರ್ಗದವರು, ಬಡವರಿಗೆ ಮಾಸಿಕ ಆದಾಯ ಒದಗಿಸಬೇಕಿದೆ‘ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ... ಬಿಲ್ ಗೇಟ್ಸ್ -ಮೆಲಿಂಡಾ ಗೇಟ್ಸ್ ದಂಪತಿ 27 ವರ್ಷಗಳ ಬಳಿಕ ವಿಚ್ಛೇದನ ಘೋಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.