ಭಾನುವಾರ, ಮೇ 29, 2022
30 °C

ದೇಶದಲ್ಲಿ 4 ಕೋಟಿ ಜನ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ: ರಾಹುಲ್‌ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಸುಮಾರು 4 ಕೋಟಿ ಜನರು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಆರೋ‍ಪಿಸಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ನಾಲ್ಕು ಕೋಟಿ ಒಂದು ಸಂಖ್ಯೆಯಲ್ಲ, ಇದರಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಭಾರತದಲ್ಲಿದ್ದ ಉತ್ತಮವಾದುದನ್ನು ಪಡೆಯಲು ಅರ್ಹತೆಯುಳ್ಳವರಾಗಿದ್ದಾರೆ’ ಎಂದು ರಾಹುಲ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ. 

ರಾಹುಲ್‌ ಗಾಂಧಿ ಆಕ್ಸ್‌ಫ್ಯಾಮ್ ವರದಿಯನ್ನು ಉಲ್ಲೇಖಿಸಿದ್ದಾರೆ. 2021 ರ ಅವಧಿಯಲ್ಲಿ ಇಬ್ಬರು ಉನ್ನತ ಉದ್ಯಮಿಗಳ ಸಂಪತ್ತು ಶತಕೋಟಿ ಡಾಲರ್‌ಗಳಷ್ಟು ಬೆಳೆದಿದೆ ಎಂದು ಗ್ರಾಫಿಕ್ ಮೂಲಕ ತೋರಿಸಿದ್ದಾರೆ. 2020 ರಿಂದ ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು